ಭಟ್ಕಳ: ಹೊನ್ನಾವರ ಮುರ್ಡೇಶ್ವರ ಮಧ್ಯೆ ಹಾದು ಹೋಗಿರುವ 110 ಕೆ.ವಿ. ಮಾರ್ಗದ ಮಧ್ಯೆ ಕೆ.ಪಿ.ಟಿ.ಸಿ.ಎಲ್.ನ ಟಿ.ಎಲ್. ಎಮ್. ವಿಭಾಗದ ಕಿರಿಯ ಇಂಜಿನಿಯರ್ ಅವರ ಮೇಲ್ವಿಚಾರಣೆಯಲ್ಲಿ ತುರ್ತು ನಿರ್ವಹಣೆಯನ್ನು ಕೈಗೊಳ್ಳುತ್ತಿರುವುದರಿಂದ ಭಟ್ಕಳ ತಾಲೂಕಿನಲ್ಲಿ ಸೆ. 4ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ತನಕ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಟ್ಕಳದಲ್ಲಿ ನಾಳೆ ವಿದ್ಯುತ್ ವ್ಯತ್ಯಯ
