ಕಾರವಾರ: ಇಲ್ಲಿನ ಕೋಗಿಲಬನ ಗ್ರಾಮದ ರಸ್ತೆ ಪಕ್ಕದ ಚರಂಡಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದೆ.
ಬೆಳ್ಳಂಬೆಳಿಗ್ಗೆ ಗ್ರಾಮದ ಜನರು ಚರಂಡಿ ಮೂಲಕ ಬಂದ ಮೊಸಳೆಯನ್ನು ಕಂಡು ಆತಂಕಗೊಂಡು ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ಮೊಸಳೆ ದಾಂಡೇಲಿಯ ಮೊಸಳೆ ಪಾರ್ಕ್‌ನಿಂದ ಗ್ರಾಮಕ್ಕೆ ಬಂದಿದೆ ಎನ್ನಲಾಗಿದೆ.
ಎರಡು ತಿಂಗಳ ಹಿಂದೆ ಕೂಡಾ ಇದೇ ರೀತೆ ಮೊಸಳೆಯೊಂದು ತಿರುಗಾಡಿ ಆತಂಕ ಸೃಷ್ಟಿಸಿತ್ತು. ಈಗ ಮೊಸಳೆ ಪಾರ್ಕ್ ಬಿಟ್ಟು ಗ್ರಾಮಕ್ಕೆ ನುಗ್ಗುತ್ತಿರುವುದು ಗ್ರಾಮಸ್ಥರಲ್ಲಿ ಭಯವನ್ನುಂಟುಮಾಡಿದೆ.