ಜೋಯಿಡಾ: ಕಾಡುಮನೆ, ಹನಿ ಪಾರ್ಕ, ಜೋಯಿಡಾ ಇವರ ಆಯೋಜನೆಯಲ್ಲಿ ಭೂಮಿ ಮೇಲೆ ಜೇನು ಬೇಕೇ?' ಎಂಬ ವಿಷಯದ ಮೇಲೆ
‘ರಾಜ್ಯ ಮಟ್ಟದ ಭಾಷಣ ಸ್ಪರ್ಧೆ’ ಯನ್ನು ಆಯೋಜನೆ ಮಾಡಿದೆ.
ಸೆ.25 ರ ಒಳಗಾಗಿ ವಾಟ್ಸಪ್ ಮೂಲಕ 7 ನಿಮಿಷಾವಧಿಯ ವಿಡಿಯೋವನ್ನು 9449420707ಗೆ ಕಳುಹಿಸಿ ಕೊಡಬೇಕು. ಸ್ಪರ್ಧೆಗೆ ವಯೋಮಿತಿಯ ನಿಬಂಧನೆ ಇಲ್ಲ ಆದರೆ ಭಾಷಣ ಕನ್ನಡದಲ್ಲೇ ಇರಬೇಕು. ಪ್ರಥಮ 5 ಸಾವಿರ, ದ್ವಿತೀಯ 3 ಸಾವಿರ ಮತ್ತು ತೃತೀಯ 2 ಸಾವಿರ ರೂ, ನೀಡಲಾಗುತ್ತದೆ.
ಭಾಷಣದ ಪ್ರಾರಂಭದಲ್ಲಿ ತಮ್ಮ ಹೆಸರು ಮತ್ತು ಊರನ್ನು ಹೇಳಬೇಕು. ವಿಡಿಯೋ ಕಳಿಸುವ ಜೊತೆಯಲ್ಲೇ ತಮ್ಮ ಸಂಪೂರ್ಣ ವಿಳಾಸ ದೂರವಾಣಿ ಸಂಖ್ಯೆಯನ್ನು ಕೂಡ ವಾಟ್ಸಪ್ ಮೂಲಕ ಕಳುಹಿಸಿಕೊಡಬೇಕು. ಸ್ಪರ್ಧೆಯ ವಿಷಯವಾಗಿ ಯಾವುದೇ ಫೆÇೀನ್ ವ್ಯವಹಾರಕ್ಕೆ ಅವಕಾಶವಿಲ್ಲ ಹಾಗೂ ಸ್ಪರ್ಧೆಯ ವಿಜೇತರಿಗೆ ಸಂಘಟಕರೇ ಮಾಹಿತಿ ನೀಡುತ್ತಾರೆ. ವಿಜೇತರನ್ನು ಆ. 2 ರಂದು ಪ್ರಕಟಿಸಿ ವಿಜೇತರಿಗೆ ಬಹುಮಾನ ಮೊತ್ತ ಹಾಗೂ ಪ್ರಶಸ್ತಿ ಪತ್ರ ಕಳುಹಿಸಿಕೊಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.