ಹೊನ್ನಾವರ: ಇಲ್ಲಿನ ಮುಟ್ಟಾ ಗ್ರಾಮದಲ್ಲಿ ಅನಧಿಕೃತ ಗೂಡಂಗಡಿಯನ್ನು ತೆರವು ಮಾಡುತ್ತಿರುವ ಸಮಯದಲ್ಲಿ ಗೂಡಂಗಡಿ ಮಾಲಿಕನೂ ಸೇರಿ ಆರು ಮಂದಿ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿದ ಕುರಿತು ಹೊನ್ನಾವರ ಪೆÇೀಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಹಾಡಗೇರಿಯವರಾದ ಮಾರುತಿ ಸುಬ್ರಾಯ್ ನಾಯ್ಕ್, ಶಂಕರ್ ಸುಬ್ರಾಯ್ ನಾಯ್ಕ್, ರವಿ ಮಾದೇವ ನಾಯ್ಕ್, ನಿತ್ಯಾನಂದ್ ಈಶ್ವರ ನಾಯ್ಕ್, ದಯಾನಂದ್ ಮಂಜುನಾಥ ನಾಯ್ಕ್ ಹಾಗೂ ಸುಬ್ರಾಯ್ ತಿಮ್ಮಪ್ಪ ನಾಯ್ಕ್ ಎನ್ನುವರ ಮೇಲೆ ಹೊನ್ನಾವರ ತಹಶೀಲ್ದಾರ ಅವರು ದೂರು ನೀಡಿದ್ದಾರೆ.
ದೂರಿನಲ್ಲಿ ಆರೋಪಿ ಮಾರುತಿ ನಾಯ್ಕ್ ಈತನ ಹೊನ್ನಾವರ ತಾಲೂಕಿನ ಮುಟ್ಟಾ ಗ್ರಾಮದ ಸರ್ವೇ ನಂ.69/ಬ ನೇದರಲ್ಲಿ ನವಗ್ರಾಮ ಆಶ್ರಯ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಮಂಜೂರಾದ ನಿವೇಶನದ ಲಗ್ತಾ ಇದ್ದ ಅನಧಿಕೃತ ಗೂಡಂಗಡಿಯನ್ನು ತಾಲೂಕಾಡಳಿತ ತೆರವುಗೊಳಿಸುವ ಸಮಯದಲ್ಲಿ ಆತನೊಂದಿಗೆ ಉಳಿದ ಐವರು ಸೇರಿ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಲ್ಲದೇ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ.
ಅಲ್ಲದೆ ತಾಲೂಕಾಡಳಿತದಿಂದ ಅನಧಿಕೃತ ಗೂಡಂಗಡಿಯನ್ನು ತೆರವುಗೊಳಿಸಿದ ಸ್ಥಳದಲ್ಲಿ ಪುನಃ ಅಕ್ರಮ ಪ್ರವೇಶ ಮಾಡಿ ಅನಧಿಕೃತ ಶೆಡ್ ನಿರ್ಮಾಣ ಮಾಡಿ ಅಕ್ರಮ ಗೂಡಂಗಡಿಯನ್ನು ತೆರೆದಿದ್ದಾರೆಂದು ಹೊನ್ನಾವರ ತಹಶೀಲ್ದಾರ ಹಾಗೂ ದಂಡಾಧಿಕಾರಿ ನಾಗರಾಜ ವೆಂಕಟ ನಾಯ್ಕ್ ಅವರು ಹೊನ್ನಾವರ ಪೆÇೀಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.