• Slide
  Slide
  Slide
  previous arrow
  next arrow
 • ಜೆಡಿಎಸ್ ಬಲಿಷ್ಟ ಸಂಘಟನೆಯಿಂದ ಮುಂದಿನ ದಿನ ಅಧಿಕಾರ; ಸೂರಜ್ ಸೋನಿ

  300x250 AD

  ಕುಮಟಾ: ಕುಮಟಾದಲ್ಲಿ ಬಲಿಷ್ಠ ಪಕ್ಷ ಸಂಘಟನೆಯನ್ನು ಮಾಡಿ, ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ನೀಡುವ ನಿಟ್ಟಿನಲ್ಲಿ ಪದಾಧಿಕಾರಿಗಳ ನೇಮಕವನ್ನು ಜಿಲ್ಲಾಧ್ಯಕ್ಷರಾದ ಗಣಪಯ್ಯ ಗೌಡರ ನೇತೃತ್ವದಲ್ಲಿ ಮಾಡಲಾಗಿದೆ ಎಂದು ಕುಮಟಾ-ಹೊನ್ನಾವರ ವಿಧಾನ ಸಭಾಕ್ಷೇತ್ರದ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಹೇಳಿದರು.

  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ವಿವರಿಸಿದರು. ಕುಮಟಾ ಹೊನ್ನಾವರ ವಿಧಾನ ಸಭಾಕ್ಷೇತ್ರದಲ್ಲಿ ಕೂಲಿ ಕಾರ್ಮಿಕರಿಗೆ ಆದ ಅನ್ಯಾಯದಲ್ಲಿ ಜೆಡಿಎಸ್ ಪಕ್ಷವೂ ಬಹಳ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದ್ದರ ಪರಿಣಾಮ 14000 ಕಾರ್ಮಿಕರಲ್ಲಿ 4500 ಕಾರ್ಮಿಕರಿಗೆ ಪುಡ್ ಕಿಟ್ ಸಿಕ್ಕಿದೆ. ಶಾಸಕ ದಿನಕರ ಶೆಟ್ಟಿಯವರು 3500 ಕಾರ್ಮಿಕರ ಕಿಟ್ ಅನ್ನು ನಾನು ಅಂಗವಿಕರಿಗೆ ವಿಧವೇಯರಿಗೆ ಕಾರ್ಮಿಕರ ಕಿಟ್ ಹಂಚಿಕೆ ಮಾಡಿದ್ದೇನೆ ಎಂದು ಉಡಾಪೆಯ ಮಾತುಗಳನ್ನು ಆಡುತ್ತಿದ್ದಾರೆ. ಕಾರ್ಮಿಕರು ಸರಕಾರ ಹಣದಲ್ಲಿ ಕಿಟ್ ಕೇಳುತ್ತಿಲ್ಲ. ಕಾರ್ಮಿಕರ ಕಲ್ಯಾಣದ ನಿಧಿಯಲ್ಲಿ ವರ್ಷ ವರ್ಷ ಅವರು ಮೆಂಬರ್ ಶಿಪ್‍ನಲ್ಲಿ ಇಟ್ಟ ಹಣದಿಂದ ಕೂಲಿ ಕಾರ್ಮಿರಿಗೆ ಆಹಾರದ ಕಿಟ್ ಬಿಡುಗಡೆ ಆಗಿದೆ ಎಂದು ಹೇಳಿದರು.

  ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವೂ ತನ್ನ ಅಸ್ಥಿತ್ವವನ್ನು ಗಟ್ಟಿಯಾಗತೋಡಗಿದೆ. ಕಳೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ತಾಲೂಕಿನಲ್ಲಿ ನಾಲ್ಕು ಗ್ರಾಮ ಪಂಚಾಯತನಲ್ಲಿ ಜೆಡಿಎಸ್ ಬೆಂಬಲಿತರು ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸಿತು. ಇನ್ನು ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಚುನಾವಣೆ ಬರಲಿದ್ದು ಈಗಾಗಲೇ ಜೆಡಿಎಸ್ ಪಕ್ಷವೂ ಚುನಾವಣೆಗೆ ಸಿದ್ದತೆಯನ್ನು ಆರಂಭವಾಗಿದೆ. ಕುಮಟಾ ಮತ್ತು ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಸೂರಜ್ ನಾಯ್ಕ ಸೋನಿಯವರ ನಾಯಕತ್ವದಲ್ಲಿ ಹಾಗೂ ತಾಲೂಕಾಧ್ಯಕ್ಷರಾದ ಸಿ.ಜಿ.ಹೆಗಡೆ ಹಾಗೂ ಮುಖಂಡರಾದ ಜಿ.ಜೆ. ಪಟಗಾರ ಹಾಗೂ ಜೆಡಿಎಸ್‍ನ ಎಲ್ಲಾ ಕಾರ್ಯಕರ್ತರೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಮುಂಬರಲಿರುವ ಜಿಲ್ಲಾ ಪಂಚಾಯತ ಹಾಗೂ ತಾಲೂಕಾಪಂಚಾಯತ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವೂ ತನ್ನ ಶಕ್ತಿಯನ್ನು ಪ್ರದರ್ಶಿಸಲಿದೆ ಎಂದರು.

  300x250 AD

  ತಾಲೂಕಿನಲ್ಲಿ ಜೆಡಿಎಸ್ ವಿವಿಧ ಪದಾಧಿಕಾರಿಗಳ ನೇಮಕ ಮಾಡಲಾಗಿದ್ದು, ತಾಲೂಕಿನ ರೈತ ಘಟಕದ ಅಧ್ಯಕ್ಷರಾಗಿ ಚಂದ್ರು ತಿಮ್ಮಣ್ಣ ಪಟಗಾರ, ಹಾಗೂ ಕಾರ್ಯದರ್ಶಿಯಾಗಿ ಚಂದ್ರಕಾಂತ ತುಳಸು ಗೌಡ, ಕಲ್ಲಬ್ಬೆ ಹಾಗೂ ತಾಲೂಕ ಯುವಘಟಕದ ಅಧ್ಯಕ್ಷರಾಗಿ ಶಿವರಾಮ ಗಣಪತಿ ಮಡಿವಾಳ, ಕಾರ್ಯದರ್ಶಿಯಾಗಿ ರವೀಂದ್ರ ಪಟಗಾರ, ಎಸ್.ಸಿ.ಘಟಕದ ಅಧ್ಯಕ್ಷರಾಗಿ, ಶಶಿಧರ ನಾರಾಯಣ ಆಡುಗೋಳಿ, ಕಾರ್ಯದರ್ಶಿಯಾಗಿ ಚಂದ್ರಶೇಖರ ಪಾಲೇಕರ, ಹಿಂದೂಳಿದ ಅಧ್ಯಕ್ಷರಾಗಿ ಸತೀಶ ಮಹಾಲೆ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾಗಿ ಬಿ.ಹೆರಮತುಲ್ಲಾ, ಕಾರ್ಯದರ್ಶಿಯಾಗಿ ಅಬ್ದುಲ್ ರೆಹಮಾನ ಇಸ್ಮಾಯಿಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷರಾದ ಸಿ.ಜಿ.ಹೆಗಡೆ ಹೇಳಿದರು.

  ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಗಣಪಯ್ಯ ಗೌಡ, ತಾಲೂಕಾ ಕಾರ್ಯಾಧ್ಯಕ್ಷರಾದ ಬಲಿಂದ್ರ ಗೌಡ, ತಾಲೂಕಾ ಉಪಾಧ್ಯಕ್ಷರಾದ ತುಳಸುದಾಸು ಶೇಟ್, ಮಹೇಂದ್ರ ನಾಗೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಎಚ್ ಪಟಗಾರ, ಮೂರುರೂ ಗ್ರಾ.ಪಂ ಅಧ್ಯಕ್ಷರಾದ ರಾಘವೇಂದ್ರ ನಾಯ್ಕ, ಶಿವರಾಮ ಗಣಪತಿ ಮಡಿವಾಳ, ಶ್ರೀಪಾಧ ಭಟ್ ಸೇರಿದಂತೆ ಇತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top