ಕುಮಟಾ: ಪಟ್ಟಣದ ಕೇಂದ್ರ ಭಾಗದಲ್ಲಿ ಸಮರ್ಪಕ ನಿರ್ವಹಣೆಯಿಲ್ಲದೇ ಸೊರಗುತ್ತಿರುವ ಮಣಕಿ ಮೈದಾನವನ್ನು ಮುಂದಿನ ಐದು ವರ್ಷದ ಮಟ್ಟಿಗೆ ತಮ್ಮ ಸುಪರ್ದಿಗೆ ಒಪ್ಪಿಸುವಂತೆ ಕೋರಿ ಮಹಾಸತಿ ಟ್ಯಾಕ್ಸಿ ಚಾಲಕ, ಮಾಲಕ ಸಂಘದವರು ಬುಧವಾರ ಉಪವಿಭಾಗಾಧಿಕಾರಿ ರಾಹುಲ್ ಪಾಂಡೆ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿವರ್ಷ ನೂರಾರು ಸಾಂಸ್ಕೃತಿಕ, ಕ್ರೀಡೆ, ಸಾಹಿತ್ಯ ಇನ್ನಿತರ ಕಾರ್ಯಕ್ರಮಗಳಿಗೆ ವೇದಿಕೆಯಾಗಿರುವ ಮಣಕಿ ಮೈದಾನ ಈವರೆಗೂ ಯಾವುದೇ ಅಭಿವೃದ್ಧಿ ಕಂಡಿಲ್ಲ. ಮೈದಾನದಲ್ಲಿರುವ ಕಟ್ಟಡವೂ ಬೀಳುವ ಸ್ಥಿತಿಯಲ್ಲಿದ್ದು ಮೈದಾನದ ಸರ್ವತೋಮುಖ ಅಭಿವೃದ್ಧಿ ಆಗಬೇಕಿದೆ. ಮೈದಾನದ ಸ್ವಚ್ಛತೆಯನ್ನು ಆಗಾಗ ಮಾಡುತ್ತಾ ಬಂದಿರುವ ಟ್ಯಾಕ್ಸಿ ಚಾಲಕ, ಮಾಲಕ ಸಂಘದವರು ಕನಿಷ್ಟ ಮುಂದಿನ ಐದು ವರ್ಷದ ಮಟ್ಟಿಗೆ ಮೈದಾನವನ್ನು ನಮ್ಮ ಸುಪರ್ದಿಗೆ ನೀಡಿದರೆ ಮೈದಾನದ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಮನವಿಯಲ್ಲಿ ಕೋರಲಾಗಿದೆ.
ಈ ವೇಳೆ ಸಂಘದ ಅಧ್ಯಕ್ಷ ನವೀನ ನಾಯ್ಕ, ಸಂದೀಪ ಗೌಡ, ಗಿರೀಶ ನಾಯ್ಕ, ಈಶ್ವರ ನಾಯ್ಕ, ಗೋಪಿಕೃಷ್ಣ, ಆಸೀಮ್ ಶೇಖ, ನಿತ್ಯಾ ನಾಯ್ಕ, ಪ್ರಸನ್ನ ಸಣ್ಣುಮನೆ, ಗೋಪಾಲ ಶೆಟ್ಟಿ, ಅಜಯ್, ಗಣೇಶ, ನಾಗರಾಜ ಹರಿಕಂತ್ರ, ದೀಪಕ ಅಂಬಿಗ, ಸಚಿನ್ ಮಡಿವಾಳ, ರಾಘವೇಂದ್ರ ಮೊಗೇರ, ಪ್ರಮೋದ, ರೋಹನ್, ಮಂಜು, ಮನೋಜ, ಡೇನಿಯಲ್ ಇನ್ನಿತರರು ಇದ್ದರು