Slide
Slide
Slide
previous arrow
next arrow

ರೋಟರಿ ಇನ್ನರ್‌ವ್ಹೀಲ್ ಕ್ಲಬ್’ನಿಂದ ಚಂದನ ಶಾಲೆಯಲ್ಲಿ ಉಪನ್ಯಾಸ ಕಾರ್ಯಕ್ರಮ

300x250 AD

ಶಿರಸಿ: ಇಲ್ಲಿನ ನರೇಬೈಲ್‌ನ ಚಂದನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಿಗೆ ರೋಟರಿ ಇನ್ನರ್‌ವ್ಹೀಲ್ ಕ್ಲಬ್ ಶಿರಸಿ ವತಿಯಿಂದ ನ್ಯೂಟ್ರೀಷಿಯನ್ ವೀಕ್ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಪೂರ್ಣಿಮಾ ಆಗಮಿಸಿದ್ದು, ಪವರ್ ಪಾಯಿಂಟ್ ಮೂಲಕ ವಿದ್ಯಾರ್ಥಿನಿಯರಿಗೆ ಉಪನ್ಯಾಸ ನೀಡಿದರು. ಹದಿ ಹರೆಯದ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೌಷ್ಠಿಕ ಆಹಾರ ಸೇವನೆ ಬಹಳ ಅಗತ್ಯ ಎಂದರು. ಜಂಕ್ ಫುಡ್ ಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

300x250 AD


ರೋಟರಿ ಇನ್ನರ್ ವ್ಹೀಲ್ ಕ್ಲಬ್ ಶಿರಸಿ ಹೆರಿಟೇಜ್ ಇದರ ಸದಸ್ಯರು ಮತ್ತು ಚಂದನ ಶಾಲಾ ಆಡಳಿತಾಧಿಕಾರಿಣಿ ವಿದ್ಯಾ ನಾಯ್ಕ ಸ್ವಾಗತಿಸಿ ಪರಿಚಯಿಸಿದರು. ಮುಖ್ಯೋಪಾಧ್ಯಾ ಯರಾದ ಶಾಂತಾರಾಮ್ ನಾಯ್ಕ ವಂದಿಸಿದರು. ರೋಟರಿ ಇನ್ನರ್ ವ್ಹೀಲ್ ಕ್ಲಬ್ ಶಿರಸಿ ಹೆರಿಟೇಜ್ ಇದರ ಅಧ್ಯಕ್ಷ ಶ್ವೇತಾ ಪ್ರಭು, ಕಾರ್ಯದರ್ಶಿ ರೇಖಾ ಪದ್ಮನಾಭ, ಎಡಿಟರ್ ನಯನಾ ಸಕಲಾತಿ ಸದಸ್ಯರಾದ ವಿದ್ಯಾ ನಾಯ್ಕ ಮತ್ತು ಉಮಾ ಹೆಗಡೆ, ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top