Slide
Slide
Slide
previous arrow
next arrow

ರುಚಿಯಾದ ಬಾಳೆಕಾಯಿ ಪಲ್ಯ ಈ ರೀತಿ ಮಾಡಿ ಸವಿದು ನೋಡಿ

300x250 AD

ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: 1 ಅರ್ಧ ಕಪ್ ಬಾಳೆಕಾಯಿ ಪೀಸ್ ಚಿಕ್ಕದಾಗಿ ಕತ್ತರಿಸಿಕೊಂಡಿದ್ದು, 1 ಅರ್ಧ ಟೇಬಲ್ ಸ್ಪೂನ್ ಎಣ್ಣೆ, 1 ಟೀ ಸ್ಪೂನ್ – ಸಾಸಿವೆ, ಕಾಲು ಟೀ ಸ್ಪೂನ್ – ಇಂಗು, 1 ಟೀ ಸ್ಪೂನ್ – ಖಾರದಪುಡಿ, ಕಾಲು ಟೀ ಸ್ಪೂನ್ – ಅರಿಶಿನ, 1 ಟೀ ಸ್ಪೂನ್ ಕೊತ್ತಂಬರಿ ಮತ್ತು ಜೀರಿಗೆ ಪುಡಿ, 1 ಟೀ ಸ್ಪೂನ್ – ಸಕ್ಕರೆ, 2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.

300x250 AD

ಮಾಡುವ ವಿಧಾನ: ಮೊದಲಿಗೆ ಒಂದು ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಸಾಸಿವೆ ಹಾಕಿ ಅದು ಸಿಡಿಯುತ್ತಲೇ ಇಂಗು ಹಾಕಿ 30 ಸೆಕೆಂಡುಗಳ ಕಾಲ ಹುರಿಯಿರಿ. ನಂತರ ಬಾಳೆಕಾಯಿ ಪೀಸ್ ಇದಕ್ಕೆ ಸೇರಿಸಿ ಸ್ವಲ್ಪ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಬೇಯಲು ಇಡಿ. ನಂತರ 3 ಟೇಬಲ್ ಸ್ಪೂನ್ ನೀರು ಸೇರಿಸಿ ಒಂದು ಮುಚ್ಚಳ ಮುಚ್ಚಿ ಬೇಯಿಸಿ, ನಂತರ ಇದಕ್ಕೆ ಖಾರದಪುಡಿ, ಅರಿಶಿನ, ಕೊತ್ತಂಬರಿ, ಜೀರಿಗೆ ಪುಡಿ, ಸ್ವಲ್ಪ ಸಕ್ಕರೆ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಬೇಯಿಸಿಕೊಂಡು ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ.

Share This
300x250 AD
300x250 AD
300x250 AD
Back to top