ನವದೆಹಲಿ: ಆಗಸ್ಟ್ ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಸಂಗ್ರಹವು 1 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ. ಒಟ್ಟು ಸಂಗ್ರಹ 1,12,020 ಕೋಟಿ ರೂ ಗಳಾಗಿದ್ದು, ಇದು ಹಿಂದಿನ ವರ್ಷದ ಇದೇ ತಿಂಗಳಿಗಿಂತ 30% ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ.
ಜಿಎಸ್‍ಟಿ ಆದಾಯವು 1 ಲಕ್ಷ ಕೋಟಿ ರೂ.ಗಿಂತ ಹೆಚ್ಚಿರುವ ಸತತ ಎರಡನೇ ತಿಂಗಳು ಇದಾಗಿದೆ. `ಆಗಸ್ಟ್ 2021 ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‍ಟಿ ಆದಾಯವು ರೂ 1,12,020 ಕೋಟಿ, ಅದರಲ್ಲಿ ಕೇಂದ್ರ ಜಿಎಸ್‍ಟಿ ರೂ 20,522 ಕೋಟಿ, ರಾಜ್ಯ ಜಿಎಸ್‍ಟಿ ರೂ 26,605 ಕೋಟಿ, ಸಮಗ್ರ ಜಿಎಸ್‍ಟಿ ರೂ 56,247 ಕೋಟಿ (ಸರಕುಗಳ ಆಮದು ಮೇಲೆ ಸಂಗ್ರಹಿಸಿದ ರೂ 26,884 ಕೋಟಿ ಸೇರಿದಂತೆ) ಮತ್ತು ಸೆಸ್ ರೂ 8,646 ಕೋಟಿ (ಸರಕುಗಳ ಆಮದು ಮೇಲೆ ಸಂಗ್ರಹಿಸಿದ ರೂ. 646 ಕೋಟಿ ಸೇರಿದಂತೆ’ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಆದರೂ, ಆಗಸ್ಟ್ ಸಂಗ್ರಹ ಜುಲೈ 2021 ರ ಸಂಗ್ರಹ ರೂ 1.16 ಲಕ್ಷ ಕೋಟಿಗಿಂತ ಕಡಿಮೆಯಾಗಿದೆ. ಆಗಸ್ಟ್ 2021 ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿನ ಜಿಎಸ್‍ಟಿ ಆದಾಯಕ್ಕಿಂತ ಶೇ.30 ರಷ್ಟು ಅಧಿಕವಾಗಿದೆ. ಆಗಸ್ಟ್ 2020 ರಲ್ಲಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಸಂಗ್ರಹ 86,449 ಕೋಟಿ ರೂ.
ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಿದ ಬಳಿಕ ಜುಲೈ ಮತ್ತು ಆಗಸ್ಟ್ 2021 ರ ಜಿಎಸ್‍ಟಿ ಸಂಗ್ರಹವು ಮತ್ತೆ 1 ಲಕ್ಷ ಕೋಟಿ ದಾಟಿದೆ, ಇದು ಆರ್ಥಿಕತೆಯು ತ್ವರಿತಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
ನ್ಯೂಸ್ 13