ಕಾರವಾರ: ಜಿಲ್ಲೆಯಲ್ಲಿ ಬುಧವಾರ 40 ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ. 48 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲಾ ಹೆಲ್ತ್ ಬುಲೇಟಿನ್ ಪ್ರಕಾರ ಕಾರವಾರದಲ್ಲಿ 20, ಅಂಕೋಲಾದಲ್ಲಿ 1, ಕುಮಟಾದಲ್ಲಿ 2, ಹೊನ್ನಾವರ 8, ಭಟ್ಕಳದಲ್ಲಿ 1, ಶಿರಸಿಯಲ್ಲಿ 1, ಸಿದ್ದಾಪುರದಲ್ಲಿ 4, ಯಲ್ಲಾಪುರ 3 ಕೇಸ್ ದೃಢಪಟ್ಟಿದೆ.
ಕಾರವಾರ 8, ಅಂಕೋಲಾ 9, ಕುಮಟಾ 11, ಹೊನ್ನಾವರ 5, ಭಟ್ಕಳ 3, ಶಿರಸಿ 8, ಸಿದ್ದಾಪುರ 0, ಯಲ್ಲಾಪುರದ ನಾಲ್ವರು ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 48 ಮಂದಿ ಕೊರೋನಾ ಗೆದ್ದು ಬಂದವರಾಗಿದ್ದಾರೆ.
ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 321 ಆಗಿದ್ದು, ಅವರಲ್ಲಿ 57 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 264 ಸೋಂಕಿತರು ಹೋಮ್ ಐಸೋಲೇಷನ್‍ನಲ್ಲಿದ್ದಾರೆ. ಈವರೆಗೆ ಸಾವಿನ ಸಂಖ್ಯೆ 761ಕ್ಕೆ ತಲುಪಿದ್ದು, ಒಟ್ಟೂ 54772 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, 53690 ಮಂದಿ ಗುಣಮುಖರಾಗಿದ್ದಾರೆ.