ಸಿದ್ದಾಪುರ: ಸಿದ್ದಾಪುರ ತಾಲೂಕಿನ ಹಲವು ಭಾಗಕ್ಕೆ ಶಾಸಕ ಹಾಗು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ತಾಲೂಕಿನ ಕೊರ್ಲಕೈ ಪಂಚಾಯತ ಜಿಡ್ಡಿಯಲ್ಲಿ ಊರಿನ ರಸ್ತೆ ಕಾಮಗಾರಿ, ಜಲಜೀವನ ಮಿಷನ್ ಯೋಜನೆ ನೀರಾವರಿ ಕಾಮಗಾರಿಯ ಭೂಮಿ ಪೂಜೆ ನೆರವೇರಿಸುವುದರ ಜೊತೆಗೆ ಜಿಡ್ಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿದರು.
ಇಲ್ಲಿಯ ಮನಮನೆ ಪಂಚಾಯತದ ಕನ್ನೆಕೊಪ್ಪ ಜಲಜೀವನ ಮಿಷನ್ ಯೋಜನೆಯ ನೀರಾವರಿ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ, ಕವಂಚೂರು ಪಂಚಾಯತ ಹೊಸಳ್ಳಿಯಲ್ಲಿ ಜಲಜೀವನ ಮಿಷನ್ ನೀರಾವರಿ ಕಾಮಗಾರಿಯ ಭೂಮಿ ಪೂಜೆ ನಡೆಸಿದರು. ಈ ವೇಳೆ ಸ್ಥಳೀಯ ಜನಪ್ರತಿನಿಧಿಗಳು, ಇಲಾಖೆಯ ವಿವಿಧ ಸ್ತರದ ಅಧಿಕಾರಿಗಳು ಉಪಸ್ಥಿತರಿದ್ದರು.