• Slide
    Slide
    Slide
    previous arrow
    next arrow
  • ಸೆ.4ಕ್ಕೆ ಸೋಲಾರ ಘಟಕ ಉದ್ಘಾಟನಾ ಸಮಾರಂಭ

    300x250 AD

    ಶಿರಸಿ: ನಗರದ ಅಜಿತ ಮನೋಚೇತನ ಸಂಸ್ಥೆಯ ಆಶ್ರಯದಲ್ಲಿ ಸೆ.4 ಶನಿವಾರ ಮಧ್ಯಾಹ್ನ 3.30 ಗಂಟೆಗೆ ನಗರದ ಮರಾಠಿಕೊಪ್ಪದಲ್ಲಿರುವ ಅಜಿತ ಮನೋಚೇತನಾ ವಿಕಾಸ ಶಾಲಾ ಆವರಣದಲ್ಲಿ ‘ಸೋಲಾರ ಘಟಕ’ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.


    ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸೆಲ್ಕೊ ಇಂಡಿಯಾದ ಸಿ.ಇ.ಒ. ಮೋಹನ ಹೆಗಡೆ ಆಗಮಿಸಲಿದ್ದಾರೆ. ಕರ್ನಾಟಕ ಸರ್ಕಾರದ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಪಾಲ್ಗೊಳ್ಳಲಿದ್ದಾರೆ. ಅಜಿತ ಮನೋಚೇತನಾ ಟ್ರಸ್ಟ್‌ನ ಅಧ್ಯಕ್ಷ ಸುಧೀರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

    300x250 AD


    ಈ ಕಾರ್ಯಕ್ರಮದಲ್ಲಿ ಅಜಿತ ಮನೋಚೇತನಾದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಸುಸ್ಥಿರ ಇಂಧನ ಅಭಿವೃದ್ಧಿಯ ಕುರಿತು ವಿಶೇಷ ಸಮಾಲೋಚನಾ ಸಭೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಹಕಾರಿ ಬ್ಯಾಂಕುಗಳ ಮುಖ್ಯಸ್ಥರು, ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಮುಖ್ಯಸ್ಥರು, ಸಹಕಾರಿ ಸಂಘಗಳ ಮುಖ್ಯಸ್ಥರನ್ನು ಆಹ್ವಾನಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top