ಹೊನ್ನಾವರ: ತಾಲೂಕಿನ ಮಂಕಿಯಲ್ಲಿ ನೂತನ ನಾಡಕಛೇರಿ ಕಟ್ಟಡವನ್ನು ಶಾಸಕ ಸುನೀಲ್ ನಾಯ್ಕ್ ಬುಧವಾರ ಲೋಕಾರ್ಪಣೆಗೊಳಿಸಿದರು.
ಸರ್ಕಾರದ ಸೇವೆಗಳಾದ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರಗಳು ಮತ್ತು ಸಾಮಾಜಿಕ ಭದ್ರತೆ ಯೋಜನೆಗಳನ್ನು ಪಡೆಯಲು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾಡಕಛೇರಿಯನ್ನು ನಿರ್ಮಿಸಲಾಗಿದ್ದು, ಜನರು ಅಗತ್ಯ ಸೇವೆಗಳನ್ನು ಪಡೆದುಕೊಳ್ಳುವಂತೆ ಶಾಸಕ ಸುನೀಲ್ ನಾಯ್ಕ ಮನವಿ ಮಾಡಿದ್ದಾರೆ.