ಕುಮಟಾ: ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಕುಮಟಾ ಘಟಕದ ವತಿಯಿಂದ ತಾಲೂಕಾ ಕಾರ್ಯಾಲಯದಲ್ಲಿ ಉಚಿತ ಪೌಷ್ಠಿಕ ಆಹಾರ ಕಿಟ್ ಗಳನ್ನು ಮಂಗಳವಾರ ವಿತರಿಸಲಾಯಿತು.
ಅಸೊಶಿಯೇಶನ್ ನ ಮುಖ್ಯಸ್ಥರಾದ ಡಾ. ಅಶೋಕ್ ಭಟ್ ಹಳಕಾರ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿ, ಆರೋಗ್ಯದ ಕಡೆಗೆ ಗಮನ ಹರಿಸುತ್ತಿಲ್ಲ. ಇದರಿಂದ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಜೊತೆಗೆ ಅವರು ಬಳಸುವ ಆಹಾರಗಳಲ್ಲಿ ಪೌಷ್ಟಿಕಾಂಶಗಳ ಕೊರತೆಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಹೀಗಾಗಿ ಪೌಷ್ಟಿಕಾಂಶ ಆಹಾರ ಪದ್ದತಿಯನ್ನು ರೂಡಿಸಿಕೊಳ್ಳಬೇಕು. ಗರ್ಭಿಣಿ ಮಹಿಳೆಯರು ಹಾಲು, ಹಣ್ಣು, ತರಕಾರಿ, ಸೊಪ್ಪಿನ ಪದಾರ್ಥಗಳನ್ನು ಹೆಚ್ಚಾಗಿ ಬಳಸಬೇಕು. ಇವುಗಳಲ್ಲಿನ ಜೀವಸತ್ವ ಮಗುವಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ.ತಾಯಿಯ ಆರೋಗ್ಯ ಕೂಡ ಕಾಪಾಡಿಕೊಂಡಂತಾಗುತ್ತದೆ ಎಂದ ಅವರು ಇಲ್ಲಿ ನೀಡಲಾಗುತ್ತಿರುವ ಪೌಷ್ಠಿಕ ಆಹಾರದ ಕಿಟ್‍ನ್ನು ಬಳಸಿ ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ ಎಂದು ಸಲಹೆ ನೀಡಿದರು.
ಅಸೊಶಿಯೇಶನ್ ನ ವ್ಯವಸ್ಥಾಪಕರಾದ ಸಂತಾನ್ ಲೂಯಿಸ್ ಮಾತನಾಡಿ, ನಿರ್ದಿಷ್ಠ ಗುಂಪಿನ ನವರಿಗೆ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್‍ನಲ್ಲಿ ಸಿಗುವ ಸೌಲಭ್ಯದ ಕುರಿತು ವಿವರಿಸಿ, ಸಂಸ್ಥೆಯು ನಡೆದು ಬಂದ ಹಾದಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರವದ ಮುಖ್ಯ ಅತಿಥಿಗಳು ಹಾಗೂ ಸರಕಾರಿ ಆಸ್ಪತ್ರೆಯ ಐ.ಸಿ.ಟಿ.ಸಿ. ಯ ಆಪ್ತ ಸಮಾಲೋಚಕರಾದ ಪ್ರದೀಪ್ ನಾಯ್ಕ ಮಾತನಾಡಿ ಆರೋಗ್ಯದ ಕುರಿತು ಪ್ರತಿಯೊಬ್ಬರೂ ಖಾಳಜಿ ವಹಿಸಿ,ಆರೋಗ್ಯ ಸಮಸ್ಯೆಯ ಕುರಿತು ಅಸೋಸಿಯೇಶನ್ ಕಾರ್ಯಾಲಯಕ್ಕೆ ಬಂದು ಚಿಕಿತ್ಸೆಯ ಮಾಹಿತಿ ಪಡೆದುಕೊಳ್ಳಿ ಎಂದರು.
ಅಸೋಸಿಯೇಶನ್ ನ ಕಾರ್ಯಕ್ರಮಾಧಿಕಾರಿ ಮಂಜುಳಾ ಗೌಡ ಸ್ವಾಗತಿಸಿದರು. ಕೋಶಾಧಿಕಾರಿ ಬೀರಣ್ಣ ನಾಯಕ, ವೈದ್ಯಾಧಿಕಾರಿ ಡಾ. ಸನ್ಮತಿ ಹೆಗಡೆ, ಸಂರಕ್ಷಾ ಎನ್,ಜಿ.ಓ. ವ್ಯವಸ್ಥಾಪಕರಾದ ಜಯಶ್ರೀ ಮತ್ತು ಸೋಶಿಯಲ್ ವರ್ಕರ್ ಸವಿತಾ ಹಾಗೂ ಅಸೊಶಿಯೇಶನ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು