• first
  second
  third
  previous arrow
  next arrow
 • ವಿವಿಧ ಬೇಡಿಕೆಗೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ

  300x250 AD

  ಕುಮಟಾ: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಮಂಗಳವಾರ ತಾಲೂಕಾ ಶಾಮಿಯಾನ ಮತ್ತು ಧ್ವನಿವರ್ಧಕ ಸಂಘದ ವತಿಯಿಂದ ತಹಶೀಲ್ದಾರ ಹಾಗೂ ಸಹಾಯಕ ಆಯುಕ್ತರ ಕಛೇರಿಗೆ ತೆರಳಿ ಮನವಿ ಸಲ್ಲಿಸಿದರು.

  ಕೋವಿಡ್ ಆರಂಭದಿಂದ ಇಲ್ಲಿಯವರೆಗೆ ಸುಮಾರು ಎರಡು ವರ್ಷಗಳು ಸಮೀಪಿಸುತ್ತಾ ಬಂದಿದೆ. ಕಾರ್ಯಕ್ರಮಗಳು ನಡೆಯಲು ಅನುಮತಿ ಇಲ್ಲದೇ ಇರುವುದರಿಂದ ಶಾಮಿಯಾಮ ಹಾಗೂ ಧ್ವನಿವರ್ಧಕದ ಕಾರ್ಮಿಕರಿಗೆ ಉದ್ಯೋಗವೇ ಇಲ್ಲದಂತಾಗಿದೆ.ಇಂತಹ ಸಂಕಷ್ಟದ ಸಮಯದಲ್ಲಿ ಉದ್ಯಮವನ್ನೇ ನಂಬಿ ಜೀವನ ಸಾಗುತ್ತಿದ್ದ ಕಾರ್ಮಿಕರಿಗೆ ಈದೀಗ ಜೀವನವೇ ಕಷ್ಟಕರವಾಗಿದೆ. ಬ್ಯಾಂಕ್ ನಿಂದ ಪಡೆದ ಸಾಲದ ಕಂತನ್ನೂ ತುಂಬಲಾಗದೇ ಕಷ್ಟಪಡುತ್ತಿದ್ದು, ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ.

  300x250 AD


  ಇಂತಹ ಸಂದರ್ಭದಲ್ಲಿ ಸರಕಾರ ಕನಿಷ್ಠ 15000 ರೂಪಾಯಿಗಳ ಸಹಾಯಧನ ನೀಡಬೇಕು.ಜೊತೆಗೆ ಮುಂಬರುವ ಗಣೇಶ ಚತುರ್ಥಿ ಹಬ್ಬಕ್ಕೆ ಬೇಕಾಗುವ ಪೆಂಡಾಲ್ ಧ್ವನಿವರ್ಧಕ, ವೇದಿಕೆ ಅಲಂಕಾರ ಮಾಡಲು ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

  ಈ ಸಂದರ್ಭದಲ್ಲಿ ಅಧ್ಯಕ್ಷರಾದ ನಿನಾದ ರಾಮಣ್ಣ, ಉಪಾಧ್ಯಕ್ಷರಾದ ಶಿವಾನಂದ ಮಹಾಲೆ, ಕಾರ್ಯದರ್ಶಿ ಬಾಬು ನಾಯ್ಕ, ಖಜಾಂಚಿ ಮಂಜುನಾಥ ನಾಯ್ಕ, ಸದಸ್ಯರಾದ ದಿನಕರ ನಾಯ್ಕ, ರವಿ ಗಾವಡಿ,ನಾಗರಾಜ ಮಡಿವಾಳ, ವಿಹಾಲ್ ನಾಯ್ಕ ಸೇರಿದಂತೆ ಮುಂತಾದವರಿದ್ದರು.

  Share This
  300x250 AD
  300x250 AD
  300x250 AD
  Back to top