Slide
Slide
Slide
previous arrow
next arrow

ಮನೆಯಲ್ಲಿಯೇ ಸುಲಭವಾಗಿ ಮಾಡಿ ಸವಿದು ನೋಡಿ ವೆಜ್ ಕುರ್ಮಾ

300x250 AD

ಅಡುಗೆ ಮನೆ: ಬೇಕಾಗುವ ಸಾಮಾಗ್ರಿಗಳು: ಹೂಕೋಸು-1 ಮಧ್ಯಮ ಗಾತ್ರದ್ದು, 1 ದೊಡ್ಡ ಈರುಳ್ಳಿ, 1 ದೊಡ್ಡ ಟೊಮೆಟೊ, ಕ್ಯಾರೆಟ್-2, ಬೀನ್ಸ್-10, ಆಲೂಗಡ್ಡೆ-2, ಮೂಲಂಗಿ-1, ಖಾರದ ಪುಡಿ 1 ಟೇಬಲ್ ಚಮಚ, ಅರಿಸಿನ ಪುಡಿ-1 ಟೀ ಸ್ಪೂನ್, ಗರಂ ಮಸಾಲಾ-1 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ತೆಂಗಿನತುರಿ-3 ಟೇಬಲ್ ಸ್ಪೂನ್, ಗೋಡಂಬಿ-5, ಗಸಗಸೆ-1 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ 2 ಟೇಬಲ್ ಸ್ಪೂನ್,

ಮಾಡುವ ವಿಧಾನ: ಮೊದಲಿಗೆ ತೆಂಗಿನತುರಿ, ಗೋಡಂಬಿ, ಗಸಗಸೆ ಒಂದು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ನಂತರ ಕುಕ್ಕರ್’ಗೆ ಎಣ್ಣೆ ಹಾಕಿ ಈರುಳ್ಳಿ ಹಾಕಿ ಹುರಿದುಕೊಳ್ಳಿ, ಈರುಳ್ಳಿ, ತುಸು ಕೆಂಪಗಾದ ನಂತರ ಅದಕ್ಕೆ ಕತ್ತರಿಸಿಕೊಂಡ ಎಲ್ಲಾ ತರಕಾರಿಗಳನ್ನು ಹಾಕಿ ಸ್ವಲ್ಪ ಉಪ್ಪು ಹಾಕಿ 20 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.

300x250 AD

ನಂತರ ಅದಕ್ಕೆ ಖಾರದ ಪುಡಿ, ಅರಿಶಿನ ಪುಡಿ, ಗರಂ ಮಸಾಲಾ, ಸ್ವಲ್ಪ ನೀರು ಹಾಕಿ 5 ನಿಮಿಷ ಕುದಿಸಿ, ನಂತರ ರುಬ್ಬಿಕೊಂಡ ಮಸಾಲಾ ಹಾಕಿ, ಸ್ವಲ್ಪ ನೀರು ಹಾಕಿ 10 ನಿಮಿಷ ಕುದಿಸಿ. ನಂತರ ಕೊತ್ತಂಬರಿಸೊಪ್ಪು ಹಾಕಿ ಗ್ಯಾಸ್ ಆಫ್ ಮಾಡಿ.

Share This
300x250 AD
300x250 AD
300x250 AD
Back to top