ಜೋಯಿಡಾ: 2 ಕಾರುಗಳ ನಡುವೆ ಅಪಾಘಾತ ಸಂಭವಿಸಿದ್ದು, ಕಾರ್‍ನಲ್ಲಿದ್ದ ಪ್ರಯಾಣಿಕರು ಗಾಯಗೊಂಡ ಘಟನೆ ತಾಲೂಕಿನ ಪಟೋಲಿ- ಗುಂದ ರಸ್ತೆ ತಿರುವಿನಲ್ಲಿ ನಡೆದಿದೆ.
ಏರ್ಟಿಗಾ- ವೆಗನಾರ್ ಕಾರ್ ಗಳ ನಡುವೆ ಮುಖಾ-ಮುಖಿ ಡಿಕ್ಕಿಯಾಗಿದ್ದು, ಅಪಘಾತದ ತೀವ್ರತೆಗೆ 2 ವಾಹನದ ಮುಂಭಾಗ ಜಖಂಗೊಂಡಿದೆ. ಜೊತೆಗೆ 2 ವಾಹನದಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದೆ. ವಿಷಯ ತಿಳಿದ 112 ಸಹಾಯವಾಣಿ ವಾಹನ ಮತ್ತು ಹೈವೇ ಪೆಟ್ರೋಲ್ ವಾಹನ ಸಿಬ್ಬಂದಿಗಳು ಗಾಯಾಳುಗಳನ್ನು ಉಪಚರಿಸಿ ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲ ಕಾಲ ಹೆದ್ದಾರಿ ಸಂಚಾರ ಬಂದ್ ಆಗಿದ್ದು, 112 ವಾಹನ ಸಿಬ್ಬಂದಿಗಳು ವಾಹನಗಳನ್ನು ತೆವು ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು.