ಕಾರವಾರ: ಅತ್ತೆ-ಸೊಸೆ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ವೇಳೆ ಹಿಂಬದಿ ಕುಳಿತಿದ ಅತ್ತೆ ಆಯ ತಪ್ಪಿ ಬಿದ್ದು, ಸಾವನ್ನಪ್ಪಿದ ಘಟನೆ ತಾಲೂಕಿನ ಆರ್ಗಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಡೆದಿದೆ.
ನಗರದ ಬಾಡಾದ ನಂದನಗದ್ದಾ ನಿವಾಸಿ ಶಾಲಿನಿ ನಾಯ್ಕ (73) ಮೃತಪಟ್ಟ ಮಹಿಳೆ. ಈಕೆ ತನ್ನ ಸೊಸೆ ವೈಶಾಲಿ ನಾಯ್ಕ ಜೊತೆ ಸ್ಕೂಟಿ ಹಿಂಬದಿ ಕುಳಿತು ಅರ್ಗಾದ ನೌಕಾನೆಲೆ ಬಳಿ ಕೆಲ ಸಾಮಗ್ರಿ ತರಲು ತೆರಳಿದ್ದರು. ಸಾಮಗ್ರಿ ಖರೀದಿಸಿ ವಾಪಸ್ಸಾಗುತ್ತಿದ್ದ ವೇಳೆ ನೌಕಾನೆಲೆ ಗೇಟ್ ಬಳಿ ರಸ್ತೆಯಲ್ಲಿ ಸ್ಕೂಟಿಯಿಮದ ಆಯ ತಪ್ಪಿ ಕೆಳಕ್ಕೆ ಬಿದ್ದಿದ್ದಾಳೆ. ಈವೇಳೆ ಗಂಭೀರ ಗಾಯಗೊಂಡ ಶಾಲಿನಿ ಮೃತಪಟ್ಟಿದ್ದಾಳೆ. ಇನ್ನು ಘಟನೆ ಸಂಬಂಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.