ಕುಮಟಾ: ಮಹಿಳೆಯರಲ್ಲಿ ಎಲ್ಲಾ ರೀತಿಯ ಸಾಮಥ್ರ್ಯ ಹಾಗೂ ಶಕ್ತಿ ಇದ್ದರು ಸಹ ಅದನ್ನು ಕಾರ್ಯ ರೂಪಕ್ಕೆ ತರುವಲ್ಲಿ ಮನದಲ್ಲಿ ಅಳುಕು ಮತ್ತು ಅಂಜಿಕೆಯಿಂದ ಹಿಂದೆ ಸರಿಯುತ್ತಿರುವವರಿಗೆ ಮನೋಸ್ಥೈರ್ಯದ ಜೊತೆಗೆ ಆರ್ಥಿಕವಾಗಿ ಸಹ ಪೆÇ್ರೀತ್ಸಾಹಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯ ಎಂದು ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರಾದ ದಿನಕರ ಕೆ. ಶೆಟ್ಟಿ ನುಡಿದರು.
ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾಯೋಜಿತ ಸ್ವ-ಸಹಾಯ ಸಂಘಗಳಿಗೆ ಬಂದಂತಹ ಲಾಭಾಂಶ ವಿತರಣಾ ಆಭಿಯಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಗ್ರಾಮೀಣ ಮಹಿಳೆಯರು ಯೋಜನೆಯಡಿ ಸಿಗುವ ಉತ್ತಮ ಅವಕಾಶವನ್ನು ಬಳಸಿಕೊಂಡು ಜೀವನ ಸಾಗಿಸುವ ಜೊತೆಗೆ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಸ್ವಾವಲಂಭನೆ ಹೊಂದುವುದರೊಂದಿಗೆ ಸ್ವತಂತ್ರ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಶಂಕರ ಶೆಟ್ಟಿ ಯವರು ಮಾತನಾಡಿ ಸ್ವ ಸಹಾಯ ಸಂಘಗಳು ಯೋಜನೆಯ ನಿಯಮಾನುಸಾರ ಶಿಸ್ತುಬದ್ಧ ವ್ಯವಹಾರ ಮಾಡಿ ಸಾಲ ವಿತರಣೆ ಹಾಗೂ ಮರು ಪಾವತಿಯನ್ನು ಕ್ರಮವತ್ತಾಗಿ ಮಾಡಿರುವುದರಿಂದ ಸಂಘಗಳಿಗೆ ಇಂದು ಲಾಭಾಂಶ ಬಂದಿದ್ದು ತಾಲೂಕಿನಲ್ಲಿ 2065 ಸಂಘಗಳು 3.14 ಕೋಟಿ ಮೊತ್ತದ ಲಾಭಾಂಶವನ್ನು ಹೊಂದಿದೆ. ಸಂಘಗಳ ವ್ಯವಹಾರವು ಎಸ್.ಬಿ.ಐ ಬ್ಯಾಂಕಿನಲ್ಲಿ ನಡೆಯುತ್ತಿದ್ದು ಇವುಗಳ ವ್ಯವಹಾರದ ನಿರ್ವಹಣೆಯನ್ನು ಕೇಂದ್ರಕಛೇರಿಯ ಬೃಹತ್ ತಂತ್ರಜ್ಞಾನ ವಿಭಾಗದಿಂದ ನಿರ್ವಹಿಸಲಾಗುತ್ತಿದೆ. ಸಂಘಗಳ ವ್ಯವಹಾರಗಳಲ್ಲಿ ಯಾವುದೇ ಲೋಪದೋಷಗಳು ಉಂಟಾಗದಂತೆ ಯೋಜನೆಯ ಕಾರ್ಯಕರ್ತರ ವತಿಯಿಂದ ನಿರಂತರವಾಗಿ ನಿಗಾ ವಹಿಸಲಾಗುತ್ತಿದೆ. ಇದರಿಂದಾಗಿ ಸಂಘಗಳ ವ್ಯವಹಾರವು ಪಾರದರ್ಶಕವಾಗಿರುವುದಲ್ಲದೇ ಸದಸ್ಯರು ತಮ್ಮ ಹಣಕಾಸಿನ ವ್ಯವಹಾರದ ಬಗ್ಗೆ ನಿರಂತರವಾಗಿ ಪರಿಶಿಲಿಸಿಕೊಳ್ಳಲು ಮಾಸಿಕವಾಗಿ ವರದಿ ನಿಡಲಾಗುತ್ತಿದೆ ಎಂದು ತಿಳಿಸಿದ ಅವರು ಕೋವಿಡ್ ಲಾಕ್ ಡೌನ್ ಸಮಯದಲ್ಲಿಯೂ ಸಹ ತಮ್ಮ ಸಂಘಗಳ ವ್ಯವಹಾರವನ್ನು ಸಮರ್ಪಕವಾಗಿ ಇಟ್ಟುಕೊಂಡಿದ್ದು ಶ್ಲಾಘನೀಯವಾಗಿದ್ದು ಎಂದರು.
ಈ ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ಸೋಲಾರ ದೀಪ, ಕುಕ್ ಸ್ಟೋವ್, ಮಾಶಾಸನ ವಿತರಿಸಲಾಯಿತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಹಿರಿಯ ವಕೀಲರಾದ ಆರ್ ಜಿ ನಾಯ್ಕ ವಹಿಸಿಕೊಂಡಿದ್ದು ವೇದಿಕೆಯಲ್ಲಿ ವೈದ್ಯಾಧಿಕಾರಿಗಳಾದ ಆಜ್ಞಾ ನಾಯಕ, ಮಂಜುನಾಥ ವಾಹಿನಿಯ ಸಂಪಾದಕ ರವಿ ಗಾವಡಿ, ಒಕ್ಕೂಟದ ಅಧ್ಯಕ್ಷೆ ಜಯಾ ಶೇಟ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಕುಮಟಾ ಯೋಜನಾಧಿಕಾರಿ ನಾಗರಾಜ ನಾಯ್ಕ ಸ್ವಾಗತಿಸಿ, ಮೇಲ್ವೀಚಾರಕರಾದ ಸುಬ್ರಾಯ ಗೌಡ ವಂದಿಸಿ, ಸದಸ್ಯೆ ನೇತ್ರಾವತಿ ಕಾರ್ಯಕ್ರಮವನ್ನು ನಿರ್ವಹಿಸಿದರು.