ಯಲ್ಲಾಪುರ: ತಾಲೂಕಿನಲ್ಲಿ ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮಂಗಳವಾರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬೇಟಿ ನೀಡಿ ಹಾನಿಯನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ತಾಲೂಕಿನ ತಳಕೆಬೈಲ್ ಭೂಕುಸಿತ ಪ್ರದೇಶ,ಕಳಚೆ ಪ್ರದೇಶ,ಅರಬೈಲ್ ಘಟ್ಟ ಹೆದ್ದಾರಿ ಕುಸಿತ,ಗುಳ್ಳಾಪುರ ಬಳಿ ಸೇತುವೆ ಕೊಚ್ಚಿ ಹೊದದ್ದನ್ನು ಸ್ಪಿಕರ್ ಕಾಗೇರಿ ಪರಿಶೀಲಿಸಿದರು. ಹಾನಿಯ ಕುರಿತು ಅಧಿಕಾರಿಗಳಿಂದ ಹಾಗೂ ಸ್ಥಳಿಯರಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಶ್ರೀಕೃಷ್ಣ ಕಾಮಕರ,ತಾ.ಪಂಇಒ ಜಗದೀಶ ಕಮ್ಮಾರ,ಲೋಕೊಪಯೋಗಿ ಇಲಾಖೆಯ ಎಇಇ ವಿ.ಎಂ.ಭಟ್ಟ,ಆರ್.ಎಫ್ಒ ಪ್ರಸಾದ ಪೆಡ್ನೆಕರ್,ಪಿಡಿಒ ಸಂತೋಷಿ ಬಂಟ, ವಾ.ಕ.ರಾ.ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್,ಸಾಮಾಜಿಕ ಕಾರ್ಯಕರ್ತರಾದ ಉಮೇಶ ಭಾಗ್ವತ್,ಗಣಪತಿ ಮಾನಿಗದ್ದೆ,ಗಣಪತಿ ಬೊಳಗುಡ್ಡೆ,ವಿಶ್ವೇಶ್ವರ ಏಕಾನ್,ಗೋಪಾಲಕೃಷ್ಣ ಗಾಂವ್ಕಾರ,ಮುಂತಾದವರು ಇದ್ದರು.