ಶಿರಸಿ: ಎಮ್‌ಇಎಸ್ ನ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ 20 ವರ್ಷ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 2013 ರಲ್ಲಿ ನಗರದ ಸರಕಾರಿ ಪ್ರಥಮ ದರ್ಜೆ ಕಾಲೆಜಿಗೆ ನಿಯೋಜನೆಗೊಂಡು ನಿವೃತ್ತರಾಗುತ್ತಿರುವ ಬಿ ಕೆ ಕೆಂಪರಾಜು ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪ್ರೊ.ಬಿ.ಕೆ ಕೆಂಪರಾಜು ಮಾತನಾಡಿ ಶಿಕ್ಷಕ ವೃತ್ತಿ ಜಗತ್ತಿನಲ್ಲಿ ಶ್ರೇಷ್ಠವಾದ ವೃತ್ತಿಯಾಗಿದೆ. ಶಿಕ್ಷಕ ಸಮಾಜದ ಸುಧಾರಣೆ ಮತ್ತು ಬದಲಾವಣೆ ಮಾಡುವ ಸಶಕ್ತತೆಯನ್ನು ಹೊಂದಿದ್ದಾನೆ. ಈ ಮಹಾವಿದ್ಯಾಲಯ ಇಷ್ಟು ವರ್ಷ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ ಎಲ್ಲರಿಗೂ ಈ ಸಂದರ್ಭದಲ್ಲಿ ಧನ್ಯವಾದವನ್ನ ಅರ್ಪಿಸುತ್ತೇನೆ ಎಂದರು.
ಎಂಇಎಸ್ ಸಂಸ್ಥೆಯ ಅಧ್ಯಕ್ಷ ಜಿ.ಎಮ್ ಹೆಗಡೆ ಮುಳಖಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರಿ ಪ್ರಾಚಾರ್ಯ ಎಮ್ ಪಿ ಭಟ್, ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಿಬ್ಬಂದಿ ಕಾರ್ಯದರ್ಶಿ ಡಾ.ಎಸ್.ಎಸ್ ಭಟ್ ಸ್ವಾಗತಿಸಿದರು. ಪ್ರೊ ಜಿ.ಟಿ ಭಟ್ ಅನಿಸಿಕೆ ವ್ಯಕ್ತ ಪಡಿಸಿದರು. ರಾಘವೇಂದ್ರ ಹೆಗಡೆ ವಂದಿಸಿದರು. ಡಾ.ಸತೀಶ ನಾಯಕ ನಿರೂಪಿಸಿದರು.