ಭಟ್ಕಳ: ತಾಲೂಕಿನ ಸಂಶುದ್ದೀನ್ ಸರ್ಕಲ್, ಹಳೆ ಬಸ್ ನಿಲ್ದಾಣ ಬಳಿ ಸೇರಿ ನಗರದ 5 ಕಡೆ ಮಟ್ಕಾ-ಒಸಿ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ನಗರದ ವಿವಿಧೆಡೆ ಸೋಮವಾರ ದಾಳಿ ಮಾಡಿದ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ. ಅವರಿಂದ 9,130 ರೂ ನಗದನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ಲೊಕೇಶ್ ನಾಯ್ಕ, ಕೃಷ್ಣಾ ಜಡ್ಡಯ್ಯಾ ನಾಯ್ಕ, ಮಣ್ಕುಳಿಯ ರತ್ನಾಕರ ಶೆಟ್ಟಿ, ಸಂಜಯ ನಾಯ್ಕ, ಮಂಜುನಾಥ ನಾಯ್ಕ ಬಂಧಿತ ಆರೋಪಿಗಳು. ಪಿಎಸೈ ಹನುಮಂತಪ್ಪ ಕುರಗುಂಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.