• Slide
    Slide
    Slide
    previous arrow
    next arrow
  • ತಿಳುಮಾತಿ ಬೀಚ್’ನಲ್ಲಿ ಅಪರೂಪದ ‘ಗಿಡುಗ ಆಮೆ’ ಕಳೆಬರಹ ಪತ್ತೆ

    300x250 AD

    ಕಾರವಾರ: ಸಮುದ್ರ ಆಮೆಗಳಲ್ಲಿ ಅತೀ ಚಿಕ್ಕ ಆಮೆಗಳ ಪ್ರಬೇಧ ಎಂದು ಹೇಳಲಾಗುವ ಹಾಕ್ಸ್ ಬಿಲ್ ಜಾತಿಯ ಸ್ಥಳೀಯ ಭಾಷೆಯಲ್ಲಿ ಗಿಡುಗ ಆಮೆ' ಎಂದು ಕರೆಯಲ್ಪಡುವ ಅಪರೂಪದ ಆಮೆ ಕಳೆಬರಹ ಪಶ್ಚಿಮ ಕರಾವಳಿಯಲ್ಲಿ ಮೊದಲ ಬಾರಿ ಕಾರವಾರದ ತಿಳುಮಾತಿ ಬೀಚ್ ಬಳಿ ಪತ್ತೆಯಾಗಿದೆ.

    ಕಳೆಬರಹವನ್ನು ಕಡಲಜೀವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಪಂಚಮಿಯವರು ಪತ್ತೆ ಮಾಡಿದ್ದಾರೆ. ಸಮುದ್ರ ಆಮೆಗಳಲ್ಲೇ ಗಾತ್ರದಲ್ಲಿ ಅತೀ ಚಿಕ್ಕದಾಗಿದ್ದು, ಇದರ ಮುಖವು ಗಿಡಗನ ಮುಖದಂತೆ ಹೋಲುತ್ತದೆ. ದೇಹದ ಮೇಲೆ ಹುಲಿಯ ದೇಹದಂತೆ ಪಟ್ಟೆಗಳಿರುತ್ತವೆ ಹಾಗೂ ಕಾಲುಗಳಲ್ಲಿ ಎರಡು ಉಗುರುಗಳಿವೆ. ನೋಡಲು ತುಂಬಾ ಸುಂದರವಾಗಿ ಕಾಣುವ ಈ ಆಮೆ ಹೆಚ್ಚಾಗಿ ಫೆಸಿಪಿಕ್ ಮತ್ತು ಅಟ್ಲಾಂಟಿಕಾ ಸಾಗರಗಳಲ್ಲಿ ಆಳವಿಲ್ಲದ ಕಡೆ ಹವಳದ ದಿಬ್ಬಗಳಲ್ಲಿ ಕಾಣುತ್ತವೆ ಎಂದು ಹೇಳಲಾಗಿದೆ.

    300x250 AD

    4000 ಕಿಲೋಮೀಟರ್ ಕ್ಕಿಂತ ಹೆಚ್ಚು ದೂರ ಕ್ರಮಿಸುವ ಸಾಮಥ್ರ್ಯ ಇರುವ 100 ಕಿಲೋ ತೂಕದ ವರೆಗೂ ಇರುತ್ತದೆ. ಆಮೆ 2ರಿಂದ 3 ವರ್ಷಗಳಿಗೊಮ್ಮೆ ಮೊಟ್ಟೆಯಿಡುತ್ತದೆ. ಬಂಗಾಳ ಕೊಲ್ಲಿ ಸೇರಿದಂತೆ ಇತರ ಭಾಗದಲ್ಲಿ ಕಂಡುಬರುವಆಲಿವ್ ರಿಟ್ಟಿ’ ಜಾತಿಯ ಆಮೆಗಳಂತೆ ಬಹುತೇಕ ಇದರ ಜೀವನ ಕ್ರಮ ಹೋಲುತ್ತದೆ.


    ದೀರ್ಘ ಕಾಲದವರೆಗೆ ಬದುಕುವ ಆಮೆಗಳು ಸತ್ತು ಕಡಲತೀರಗಳಿಗೆ ಬರತೊಡಗಿದೆ. ಹೀಗಾಗಿ ಇವುಗಳ ಸಾವಿನ ಬಗ್ಗೆ ಹೆಚ್ಚು ಅಧ್ಯಯನದ ಅವಶ್ಯಕತೆ ಇದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.

    Share This
    300x250 AD
    300x250 AD
    300x250 AD
    Leaderboard Ad
    Back to top