• Slide
    Slide
    Slide
    previous arrow
    next arrow
  • ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ; 112 ERSS ಸೇವೆಗೆ ಚಾಲನೆ ನೀಡಿದ ಸ್ಪೀಕರ್ ಕಾಗೇರಿ

    300x250 AD

    ಶಿರಸಿ: ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು 112 ERSS ಸೇವೆ ಆರಂಭವಾಗಿದ್ದು ಸಾರ್ವಜನಿಕರು ಈ ಸೇವೆಯನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಗರದ ಬಿಡ್ಕಿಬೈಲ್ ನಲ್ಲಿ ಸೇವೆಗೆ ಚಾಲನೆ ನೀಡಿಹೇಳಿದರು.


    ಶಿರಸಿಯಲ್ಲಿ ಸಂತೋಷದಿಂದ ಪ್ರಾರಂಭಿಸುತ್ತಿದ್ದೇವೆ. ಒಂದು ಭಾರತ ಒಂದು ತುರ್ತು ಕರೆ ಸಂಖ್ಯೆ ಪರಿಕಲ್ಪನೆಯಡಿ ಕರ್ನಾಟಕ ದಲ್ಲಿ 112 ಸಹಾಯವಾಣಿಯನ್ನು ಆರಂಭಿಸಲಾಗಿದೆ. ಜನರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.


    ಡಿವೈಎಸ್ಪಿ ರವಿ ನಾಯ್ಕ ಮಾತನಾಡಿ ಸಾರ್ವಜನಿಕರು 112 ಸಂಖ್ಯೆ ಗೆ ಕರೆಮಾಡಿ ಮುಕ್ತ ವಾಗಿ ತಮ್ಮ ದೂರನ್ನು ತಿಳಿಸಬಹುದಾಗಿದೆ. ದೂರು ನೀಡಿದ ಕೆಲವೇ ಕ್ಷಣದಲ್ಲಿ ಗಳಲ್ಲಿ ಪೆÇಲೀಸರು ಕಾರ್ಯಪ್ರವೃತ್ತರಾಗಿ ಅಪರಾಧಗಳನ್ನು ತಡೆಯುತ್ತೇವೆ. ಇದುವರೆಗೂ ಪೆÇಲೀಸ್ 100, ಅಗ್ನಿಶಾಮಕ 101, ಹೀಗೆ ತುರ್ತು ಸಹಾಯಕ್ಕೆ ವಿವಿಧ ಸಹಾಯವಾಣಿ ಇತ್ತು. ಈಗ ದೂರವಾಣಿ ಸಂಖ್ಯೆ 112 ಗೆ ಕರೆ ಮಾಡುವ ಮೂಲಕ ಜನರು ಅಗತ್ಯ ಸೇವೆಗಳನ್ನು ಪಡೆಯಬಹುದಾಗಿದೆ. ದಿನದ 24ಗಂಟೆಯೂ ಈ ಸಹಾಯವಾಣಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು ಡಿಜಿಟಲ್ ತಂತ್ರಜ್ಞಾನದ ಮೂಲಕ ಕರೆ ಮಾಡಿದರೂ ಇರುವ ಸ್ಥಳದ ವಿವರಗಳನ್ನು ಸಂಗ್ರಹಿಸುವ ವ್ಯವಸ್ಥೆ ಯನ್ನು ಸಹಾಯವಾಣಿಯಲ್ಲಿ ಮಾಡಲಾಗಿದೆ.

    300x250 AD


    ಶಾಲಾ ಕಾಲೇಜುಗಳಿಗೆ ಬರುವ ಹೆಣ್ಣು ಮಕ್ಕಳಿಗೆ ಯಾರೇ ಕಿರಿಕಿರಿ ಮಾಡಿದರೂ ಅವರು 112 ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ರಾಜ್ಯದ ಯಾವುದೇ ರಸ್ತೆ ಹೆದ್ದಾರಿಗಳಲ್ಲಿ ಸುಲಿಗೆ, ದರೋಡೆ ನಡೆಯುವ ಸಂದರ್ಭದಲ್ಲಿ ನೇರವಾಗಿ 112ಗೆ ಕರೆ ಮಾಡುವ ಮೂಲಕ ಪೆÇೀಲೀಸ್ ತುರ್ತು ಸೇವೆ ಪಡೆಯಬಹುದು ಎಂದರು.


    ನಂತರ ಹಳೇ ಬಸ್ ನಿಲ್ದಾಣ ದಲ್ಲಿರುವ ಸಾರಿಗೆ ಸಂಸ್ಥೆ ವಾಹನಗಳಿಗೆ 112 ಜಾಗೃತಿ ಮೂಡಿಸುವ ಚಿತ್ರನ್ನು ಅಂಟಿಸಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ್ ಎಮ್ ಆರ್ ಕುಲಕರ್ಣಿ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ನಗರ ಠಾಣೆ ಪಿಎಸ್‍ಐ ರಾಜಕುಮಾರ್, ಮಾರುಕಟ್ಟೆ ಠಾಣೆ ಪಿಎಸ್‍ಐ ಭೀಮಾಶಂಕರ, ಗ್ರಾಮೀಣ ಠಾಣೆ ಪಿಎಸ್‍ಐ ಶಾಮ್ ಪಾವಸ್ಕರ್ ಹಾಗೂ ಇತರರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top