ಶಿರಸಿ: ಸ್ಫೂರ್ತಿ ಕೇರಂ ಅಸೋಸಿಯೇಷನ್, ದೇವಿಕೆರೆ ಶಿರಸಿ ಆ.29 ರಂದು ನಡೆಸಿದ ಪುರುಷರ ಜಿಲ್ಲಾ ಮಟ್ಟದ ಸಿಂಗಲ್ಸ್ ಪಂದ್ಯಾವಳಿಯನ್ನು ರಾಷ್ಟ್ರೀಯ ಕೇರಂ ನಿರ್ಣಾಯಕರಾದ ಚಂದ್ರು ಭಟ್ ಉದ್ಘಾಟಿಸಿದರು.
ಚಂದ್ರು ಭಟ್ ಮಾತನಾಡಿ ಕೇರಂ ಆಟಗಾರರಿಗೂ ಕೂಡ ಸ್ಕಾಲರ್‍ಶಿಪ್ ಬರುವಂತಹ ವ್ಯವಸ್ಥೆಯಿದ್ದು ಸರಕಾರಿ ನೌಕರರಾಗಲು ಕೂಡ ಸಾಧ್ಯತೆಯಿದ್ದು ಶಾಲಾ ಹಾಗೂ ಕಾಲೇಜಿನಲ್ಲಿ ರಾಷ್ಟ್ರೀಯ ನಿಯಮಾನುಸಾರ ಕೇರಂ ಆಟವನ್ನು ಆಡಿಸುವ ವ್ಯವಸ್ಥೆ ಯಾಗಬೇಕು ಅದಕ್ಕೆ ಬೇಕಾದ ಮಾಹಿತಿಯನ್ನು ನೀಡಲು ಸದಾ ಸಿದ್ಧ ಎಂದರು.
ಶಿರಸಿಯ ನಿಸ್ಸಾರ್ ಚೌಟಿ ಸಿಂಗಲ್ ಪ್ರಥಮ ಸ್ಥಾನ, ಅಣ್ಣಪ್ಪ ಹರಿಜನ ದ್ವಿತೀಯ ಹಾಗೂ ಕಾರ್ತಿಕ್ ಭಟ್ ತೃತೀಯ ಬಹುಮಾನ ಪಡೆದರು.
ಈ ಸಂದರ್ಭದಲ್ಲಿ ಇನ್ನು ಮುಂದೆ ಎಲ್ಲಾ ವಯೋಮಾನದವರಿಗೂ ಪಂದ್ಯಾವಳಿಯನ್ನು ನಿರಂತರ ನಡೆಸುವ ನಿರ್ಣಯ ತೆಗೆದುಕೊಳ್ಳಲಾಯಿತು. ಸಿರ್ಸಿಯ ದೇವಿಕೆರೆಯ ಸ್ಫೂರ್ತಿ ಕ್ಯಾರಂ ಅಸೋಸಿಯೇಷನ್ ರಾಷ್ಟೀಯ ನಿಯಮಾನುಸಾರ ಸಂಘಟಿಸಿತ್ತು ಎಂದು ಅಧ್ಯಕ್ಷ ಚಂದ್ರು ಭಟ್ ತಿಳಿಸಿದ್ದಾರೆ.