• first
    second
    third
    previous arrow
    next arrow
  • ಸೆ.6 ರಿಂದ 6, 7, 8 ನೇ ತರಗತಿ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್

    300x250 AD


    ಬೆಂಗಳೂರು: ರಾಜ್ಯದಲ್ಲಿ 6, 7 ಹಾಗೂ 8 ನೇ ತರಗತಿ ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ.


    ಇಂದು ತಜ್ಞರ ಜೊತೆ ನಡೆದ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್. ಅಶೋಕ್ ಅವರು, ಕೋವಿಡ್ ಪಾಸಿಟಿವಿಟಿ ದರ 2 % ಕಡಿಕೆ ಇರುವ ತಾಲೂಕುಗಳಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸಿ ಸೆಪ್ಟೆಂಬರ್ 6 ರಿಂದ ಭೌತಿಕ ತರಗತಿಗಳ 6, 7, 8ನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡುತ್ತಿದೆ ಎಂದರು.


    50% ಒಂದು ದಿನ ಗ್ಯಾಪ್ ಮಕ್ಕಳ ಹಾಜರಾತಿಯೊಂದಿಗೆ ತರಗತಿ ನಡೆಸಲಾಗುತ್ತದೆ. ಸೋಮವಾರದಿಂದ ಶುಕ್ರವಾರದ ವರೆಗೆ ಮಾತ್ರ ಶಾಲೆ ತೆರೆಯಲಿದೆ. ಶನಿವಾರ ಹಾಗೂ ಭಾನುವಾರ ಶಾಲೆ ಇರುವುದಿಲ್ಲ. ಈ ಎರಡು ದಿನ ಶಾಲೆಯನ್ನು ಸ್ಯಾನಿಟೈಸ್ ಹಾಗೂ ಸ್ಚಚ್ಛಗೊಳಿಸುವ ಕಾರ್ಯ ನಡೆಯಲಿದೆ ಎಂದರು.

    300x250 AD


    ಇನ್ನು ಕಳೆದ ವಾರ 9,10 ಹಾಗೂ ಪಿಯು ತರಗತಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿತ್ತು. ಇದೀಗ 6 ರಿಂದ 8 ನೇ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top