• Slide
    Slide
    Slide
    previous arrow
    next arrow
  • ಉಮ್ಮಚಗಿಯ ವಿ. ಗಜಾನನ ಭಟ್’ಗೆ ಮಹಾರಾಷ್ಟ್ರದ ಪ್ರತಿಷ್ಠಿತ ಕಾಳಿದಾಸ ಸಾಧನಾ ಪುರಸ್ಕಾರ

    300x250 AD

    ನಾಗ್ಪುರ: ಮಹಾರಾಷ್ಟ್ರ ಸರ್ಕಾರದ ಪ್ರತಿಷ್ಠಿತ ಕಾಳಿದಾಸ ಸಾಧನಾ ಪುರಸ್ಕಾರಕ್ಕೆ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮದ ವಿದ್ವಾನ್ ಗಜಾನನ ಭಟ್ ಕುಂದರಗಿ ಭಾಜನರಾಗಿದ್ದಾರೆ.


    ದೇಶದ ಸಂಸ್ಕೃತ ವಿದ್ವಾಂಸರಿಗೆ ಕೊಡಮಾಡುವ ಮಹಾಕವಿ ಕಾಳಿದಾಸ್ ಸಂಸ್ಕೃತ ಸಾಧನಾ ಪ್ರಶಸ್ತಿಯನ್ನು ಶನಿವಾರ ರಾಮ್‍ಟೆಕ್‍ನ ಕವಿಕುಲಗುರು ಕಾಳಿದಾಸ್ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಮಹಾರಾಷ್ಟ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಉದಯ್ ಸಾವಂತ್ ಅವರು ನಾಗಪುರದ ಕವಿ ಕುಲ ಗುರು ಕಾಳಿದಾಸ ಸಂಸ್ಕೃತ ವಿಶ್ವ ವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ವಿದ್ವಾನ್ ಗಜಾನನ ಭಟ್ ದಂಪತಿಯನ್ನು ಗೌರವಿಸಿ ಪ್ರಶಸ್ತಿ ಪ್ರದಾನ ಮಾಡಿದರು.


    ಮಹಾರಾಷ್ಟ್ರ ಸರ್ಕಾರವು ಸಂಸ್ಕೃತ ಭಾಷೆ ಹಾಗೂ ಸಂಸ್ಕೃತ ಸಂಶೋಧನೆ, ಪ್ರಕಟಣೆ, ಅಧ್ಯಯನ ಮತ್ತು ಬೋಧನೆ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡಿದ ದೇಶದ ವಿದ್ವಾಂಸರಿಗೆ ವಾರ್ಷಿಕವಾಗಿ ನೀಡಲಾಗುತ್ತದೆ. 2018, 2019 ಮತ್ತು 2020ರ ಮೂರು ವರ್ಷದ ಮಹಾಕವಿ ಕಾಳಿದಾಸ್ ಸಂಸ್ಕೃತ ಸಾಧನಾ ಪ್ರಶಸ್ತಿಯನ್ನು ಮಹಾರಾಷ್ಟ್ರ ಸರ್ಕಾರ ಘೋಷಿಸಿತ್ತು.

    300x250 AD


    ಭಾರತದ ವಿವಿಧ ರಾಜ್ಯಗಳ 48 ವಿದ್ವಾಂಸರಿಗೆ 25,000 ರೂ.ಗಳ ನಗದು, ಪ್ರಮಾಣಪತ್ರ ಮತ್ತು ಪುಸ್ತಕಗಳನ್ನು ಒಳಗೊಂಡ ಪ್ರಶಸ್ತಿಯನ್ನು ನೀಡಲಾಯಿತು. ಮಹಾರಾಷ್ಟ್ರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್ ಸಮಂತ್, ಉನ್ನತ ಶಿಕ್ಷಣ ಇಲಾಖೆ ಆಯೋಜಿಸಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.


    `ಸಂಸ್ಕೃತ ಭಾಷೆಯನ್ನು ಪೆÇೀಷಿಸುವುದು ಮತ್ತು ರಕ್ಷಿಸುವುದು ಅಗತ್ಯವಾಗಿದೆ. ನಾನು ಮೊದಲು ವಿಶ್ವವಿದ್ಯಾಲಯದ ಉಪಕೇಂದ್ರವನ್ನು ರತ್ನಗಿರಿಯಲ್ಲಿ ಮತ್ತು ಗುರುಕುಲವನ್ನು ನನ್ನ ಕ್ಷೇತ್ರದ ಗಣಪತಿ ಪುಲೆಯಲ್ಲಿ ಸ್ಥಾಪಿಸಲು ನಿರ್ಧರಿಸಿದೆ. ವಿಶ್ವವಿದ್ಯಾನಿಲಯದ 25 ವರ್ಷಗಳ ಪೂರ್ಣಗೊಳಿಸುವಿಕೆಯನ್ನು ಗುರುತಿಸಲು, ಪುಣೆ, ಪರಭಾನಿ ಮತ್ತು ಜಲಗಾಂವ್‍ನಲ್ಲಿ ಮೂರು ಉಪ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.


    ರಾಮಟೆಕ್ ಸಂಸದ ಕೃಪಾಲ್ ತುಮನೆ ಮುಖ್ಯ ಅತಿಥಿಯಾಗಿದ್ದರು. ಉಪಕುಲಪತಿ ಶ್ರೀನಿವಾಸ ವರಖೇಡಿ ಉಪಸ್ಥಿತರಿದ್ದರು. ಮಾಜಿ ಉಪಕುಲಪತಿ ಪಂಕಜ್ ಚಂಡೆ, ಮಹರ್ಷಿ ಪಾಣಿನಿ ಸಂಸ್ಕೃತ ಮತ್ತು ವೈದಿಕ್ ವಿಶ್ವವಿದ್ಯಾಲಯದ ಉಪಕುಲತಿ ವಿಜಯಕುಮಾರ್, ಕೆಕೆಎಸ್‍ಯು ಡೀನ್ ನಂದ ಪುರಿ, , ಕೆಕೆಎಸ್‍ಯು ಮತ್ತು ಸಂಸ್ಕೃತ ಸಾಧನಾ ಪ್ರಶಸ್ತಿ ಸಮಿತಿಯ ಕಾರ್ಯದರ್ಶಿ ಕವಿತಾ ಹೊಳೆ ಮೊದಲಅದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top