ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯಾದ ‘ವಿಶ್ವದರ್ಶನ ಸೇವಾ’ ಆಯೋಜಿಸಿರುವ ಕಾಲ ಮಿತಿಯ ಯೋಗ ಶಿಬಿರಕ್ಕೆ ಸೋಮವಾರ ಇಲ್ಲಿನ ಸಂಸ್ಥೆಯ ಆವಾರದಲ್ಲಿ ಚಾಲನೆ ದೊರಕಿತು.
ಯೋಗ ಶಿಕ್ಷಕ ಸುಬ್ರಾಯ ಭಟ್ಟ ಹಾಗೂ ದಿವಾಕರ ಮರಾಠಿ ಯೋಗಾಭ್ಯಾಸದ ಮಹತ್ವದ ಕುರಿತು ಶಿಬಿರಾರ್ಥಿಗಳಿಗೆ ವಿವರಿಸಿದರು. ನಂತರ ಯೋಗ, ಪ್ರಾಣಾಯಾಮ ತರಬೇತಿ ನಡೆಸಿಕೊಟ್ಟರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಮುಖ್ಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಅವರು ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿದರು. ಖೈರುನ್ ಶೇಖ್ ಸ್ವಾಗತಿಸಿದರು. ವಿಶ್ವದರ್ಶನ ಸೇವಾ ತಂಡದ ಎಂ.ಆರ್ ಭಟ್ಟ ಇತರರು ಇದ್ದರು.
ಯೋಗ ಶಿಬಿರ 30 ದಿನಗಳ ಕಾಲ ಮುಂಜಾನೆ 6ರಿಂದ 7ರವರೆಗೆ ನಡೆಯಲಿದೆ. ಯೋಗ ಶಿಬಿರದಲ್ಲಿ ಭಾಗವಹಿಸಲು ಆಸಕ್ತರು 9886085046 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಾಮುಹಿಕವಾಗಿ ಯೋಗಾಭ್ಯಾಸ ಮಾಡುಡುವುದರಿಂದ ಮನಸಿಗೆ ಹೊಸ ಚೈತನ್ಯ ಬಂದಿದೆ. – ಸದಾನಂದ ದಬಗಾರ, ಶಿಬಿರಾರ್ಥಿ