ಕುಮಟಾ: ಆಶ್ರಯ ಫೌಂಡೇಶನ್ ಹಾಗೂ ಡೆಲ್ ಟೆಕ್ನಾಲಜೀಸ್ ವತಿಯಿಂದ ಪಟ್ಟಣದ ಪುರಭವನ ಹಾಗೂ ಶಾಂತೇರಿ ಕಾಮಾಕ್ಷಿ ಸಭಾಭವನದಲ್ಲಿ ಒಂದು ಸಾವಿರ ಡೋಸ್ ಉಚಿತ ಕೋವಿಡ್ ಲಸಿಕೆಯನ್ನು ನೀಡಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ ತಾಲೂಕಿನ ಜನತೆಗೆ ವ್ಯಾಕ್ಸಿನ್ ನೀಡಬೇಕೆಂಬ ಉದ್ದೇಶದಿಂದ ಸರಕಾರ ನೀಡುವ ವ್ಯಾಕ್ಸಿನ್ ಜೊತೆಗೆ ದಾನಿಗಳ ಮೂಲಕ ನೆರವು ಪಡೆದುಕೊಂಡು ಸುಮಾರು ಒಂದು ಸಾವಿರ ಡೋಸ್ ಲಸಿಕೆ ನೀಡಲಾಗುತ್ತಿದೆ. ಆಶ್ರಯ ಫೌಂಡೇಷನ್ ನ ರಾಜೀವ್ ಗಾಂವಕರ್ ಅವರು ನನ್ನ ಮನವಿಗೆ ಸ್ಪಂದಿಸಿ ಲಸಿಕೆಯನ್ನು ನೀಡಿದ್ದು ಅವರಿಗೆ ತಾಲೂಕಿನ ಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಆಶ್ರಯ ಫೌಂಡೇಶನ್ ಮುಖ್ಯಸ್ಥ ರಾಜೀವ ಗಾಂವ್ಕರ, ಡೆಲ್ ಟೆಕ್ನೋಲಿಜಿಸ್ ಮುಖ್ಯಸ್ಥೆ ಅರ್ಚನಾ ಎಸ್.ಆರ್, ಹೋಪ್ ಫೌಂಡೇಶನ್ ಮುಖ್ಯಸ್ಥ ಜೊಸೇಫ್, ತಾಲೂಕಾ ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ, ಯುನೈಟೆಡ್ ವೇ, ಅಮ್ ಚಮ್ ಇಂಡಿಯಾ ಪ್ರಮುಖರು ಹಾಗು ಪಕ್ಷದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರರು.