ಹೊನ್ನಾವರ: ಇಲ್ಲಿನ ಮುರ್ಡೇಶ್ವರದ ಯುವತಿಯೋರ್ವಳು ಝೆರಾಕ್ಸ್ ಅಂಗಡಿಗೆ ಹೋಗಿಬರುತ್ತೇನೆ ಎಂದು ಹೇಳಿ ಹೋದವಳು ನಾಪತ್ತೆಯಾದ ಬಗ್ಗೆ ಮುರ್ಡೇಶ್ವರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುರ್ಡೇಶ್ವರದ ನ್ಯಾಷನಲ್ ಕಾಲೋನಿಯ ಯುವತಿ ಬಿ.ಬಿ.ಸೀಮಾ ಎಂಬಾಕೆಯೇ ನಾಪತ್ತೆಯಾದ ಯುವತಿಯಾಗಿದ್ದು, ಆ.23 ರಂದು ಝರಾಕ್ಸ್ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ಮನೆಗೆ ಮರಳಿ ಬಂದಿಲ್ಲ ಎಂದು ಕಾಣೆಯಾದ ಯುವತಿಯ ತಾಯಿ ಫಾತಿಮಾ ಮುರ್ಡೇಶ್ವರ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಈ ಘಟನೆ ಸಂಬಮಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.