Slide
Slide
Slide
previous arrow
next arrow

ಪ್ಯಾರಾಲಿಂಪಿಕ್ಸ್; ಚಿನ್ನ ಗೆದ್ದು ದಾಖಲೆ ಬರೆದ ‘ಅವನಿ ಲೇಖರ’

300x250 AD

ಟೊಕಿಯೋ: ಜಪಾನಿನ ಟೊಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಶೂಟರ್ ಅವನಿ ಲೇಖರ ಅವರು ಶೂಟಿಂಗ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಈಗಾಗಲೇ ಎರಡು ಬೆಳ್ಳಿ, ಒಂದು ಕಂಚು ಲಭಿಸಿದ್ದು, ಇದೀಗ ಭಾರತದ ಚಿನ್ನದ ಕನಸನ್ನು ೧೦ ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಅವನಿ ಲೇಖರ್ ನನಸಾಗಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಆ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಭಾರತ ಅಭೂತಪೂರ್ವ ಸಾಧನೆ ಮೆರೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.

300x250 AD

ನಿನ್ನೆಯಷ್ಟೇ ಭಾರತೀಯ ಕ್ರೀಡಾಪಟುಗಳಾದ ಭವಿನಾ ಬೆನ್ ಪಟೇಲ್ ಮತ್ತು ನಿಶದ್ ಕುಮಾರ್ ಬೆಳ್ಳಿ ಪದಕ, ವಿನೋದ್ ಕುಮಾರ್ ಕಂಚು ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದರು. ಇದೀಗ ನಾಲ್ಕನೇ ಪದಕ ಭಾರತಕ್ಕೆ ಒಲಿದಿದ್ದು, ಅವನಿ ಅವರು ಚಿನ್ನ ಗೆಲ್ಲುವ ಮೂಲಕ ಭಾರತದ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ.

Share This
300x250 AD
300x250 AD
300x250 AD
Back to top