ಯಲ್ಲಾಪುರ: ತಾಲೂಕಿನಲ್ಲಿ ಆ.30 ಸೋಮವಾರ 1500 ಡೋಸ್ ಲಸಿಕೆ ಲಭ್ಯವಿದ್ದು, ಪ್ರಥಮ ಮತ್ತು ದ್ವಿತೀಯ ಡೋಸ್ ಪಡೆದುಕೊಳ್ಳುವವರಿಗೆ ನೀಡಲಾಗುತ್ತದೆ ಎಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಭ್ಯವಿರುವ 1500 ಡೋಸ್ ಲಸಿಕೆಯನ್ನು ತಾಲೂಕಾಸ್ಪತ್ರೆಯಲ್ಲಿ 200, ಚವತ್ತಿ ಪ್ರಾ.ಆರೋಗ್ಯ ಕೇಂದ್ರ 50, ಮಂಚಿಕೇರಿ ಪ್ರಾ.ಆರೋಗ್ಯ ಕೇಂದ್ರ 300, ಕುಂದರಗಿ ಪ್ರಾ.ಆರೋಗ್ಯ ಕೇಂದ್ರ 200, ಕಿರವತ್ತಿ ಪ್ರಾ.ಆರೋಗ್ಯ ಕೇಂದ್ರ 200, ದೇಹಳ್ಳಿ ಪ್ರಾ.ಆರೋಗ್ಯ ಕೇಂದ್ರ 50, ಮಲವಳ್ಳಿ ಪ್ರಾ.ಆರೋಗ್ಯ ಕೇಂದ್ರ 50, ಕಳಚೆ ಪ್ರಾ.ಆರೋಗ್ಯ ಕೇಂದ್ರ 50, ವಜ್ರಳ್ಳಿ ಪ್ರಾ.ಆರೋಗ್ಯ ಕೇಂದ್ರ 200, ನಂದೊಳ್ಳಿ ಪ್ರಾ.ಆರೋಗ್ಯ ಕೇಂದ್ರದಲ್ಲಿ 200 ಡೋಸ್ ಲಸಿಕೆ ಲಭ್ಯವಿದೆ ಎಂದು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಎಷ್ಟು ಕೊರೊನಾ ಕೇಸ್ ದಾಖಲು: ಯಲ್ಲಾಪುರದಲ್ಲಿ ಭಾನುವಾರ 4 ಕೊರೊನಾ ಕೇಸ್ ದಾಖಲಾಗಿದ್ದು, ಸದ್ಯ 31 ಕೇಸ್ ಸಕ್ರಿಯವಾಗಿದೆ.
ತಾಲೂಕಿನಲ್ಲಿ ಈವರೆಗೆ 3988 ಕೇಸ್ ದಾಖಲಾಗಿದ್ದು, 3922 ಮಂದಿ ಗುಣಮುಖರಾಗಿ ಬಂದಿದ್ದಾರೆ. ಇಂದು ಮೂವರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ.