ಗೋಕರ್ಣ: ಇಲ್ಲಿನ ಗಂಗೆಕೊಳ್ಳ ಕಡಲತೀರದಲ್ಲಿ ಭಾನುವಾರ ಮುಂಜಾನೆ ಅಪರಿಚಿತ ಶವವೊಂದು ಪತ್ತೆಯಾಗಿದೆ.
ಅಪರಿಚಿತ ಪುರುಷ ಶವ ಪತ್ತೆಯಾಗಿದ್ದು 40 ರಿಂದ 45 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಎರಡು ದಿನದ ಹಿಂದೆಯೆ ವ್ಯಕ್ತಿ ಮೃತಪಟ್ಟಿರಬಹುದು ಎಂದು ಊಹಿಸಲಾಗಿದೆ.
ಕಡಲತೀರದಲ್ಲಿ ಅಪರಿಚಿತ ಶವವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವನ್ನು ಗೋಕರ್ಣದ ಶವಾಗಾರಕ್ಕೆ ಸಾಗಿಸಲಾಗಿದ್ದು ಪತ್ತೆಕಾರ್ಯ ನಡೆಯುತ್ತಿದೆ.
ಗಂಗೆಕೊಳ್ಳದಲ್ಲಿ ಅಪರಿಚಿತ ಶವ ಪತ್ತೆ
