• first
    second
    third
    previous arrow
    next arrow
  • ನೊಂದವರ ಬದುಕಿಗೆ ಆಸರೆಯಾಗಬೇಕು:ಶ್ರೀರಂಗ ಕಟ್ಟಿ

    300x250 AD

    ಯಲ್ಲಾಪುರ:ಬದುಕಿನ ಕಾಲಘಟ್ಟಗಳಲ್ಲಿ ಅನೇಕ ಸವಾಲುಗಳು ಎದುರಾಗುತ್ತದೆ. ಕಷ್ಟಗಳಿಗೆ ಧೃತಿಗೆಡದೆ ಮುಂದಿನ ನಮ್ಮ ಗುರಿ ತಲುಪುವಲ್ಲಿಮಹತ್ವದ ಹೆಜ್ಜೆ ಇರಿಸಬೇಕಾಗುತ್ತದೆ. ಪಕೃತಿಯ ಮುನಿಸಿಗೆ ಅನೇಕರ ಬದುಕು ಕಷ್ಟಕ್ಕೊಳಗಾಗಿದೆ. ಆದರೆ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ ಎಂದು ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀರಂಗ ಕಟ್ಟಿ ಹೇಳಿದರು‌.

    ಅವರು ಶನಿವಾರ ಯಲ್ಲಾಪುರ ತಾಲೂಕಿನ ಹೊನಗದ್ದೆ ಗ್ರಾಮದ ಜಯರಾಮ ಹೆಗಡೆಯವರ ಮನೆಯ ಆವಾರದಲ್ಲಿ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಸಹಾಯಧನದ ಚೆಕ್ ವಿತರಿಸಿ ಮಾತನಾಡುತ್ತಿದ್ದರು.

    ಮಾನವೀಯತೆಗೆ ಮನಸ್ಸು ಕರಗುವ ಹಾಗೆ ಈ ಸಲದ ಅತಿವೃಷ್ಟಿ ಭೂಮಿ ಕುಸಿತದ ಮೂಲಕ ದಾಖಲೆ ಪ್ರಮಾಣದಲ್ಲಿ ಕೃಷಿ ಭೂಮಿ ಮಣ್ಣಾಗಿದೆ.‌ ಬದುಕಿನ ನೆಲೆ ಕಳೆದುಕೊಂಡವರಿಗೆ ಸಾಂತ್ವನ ಹೇಳಿ ಆತ್ಮ ವಿಶ್ವಾಸ ಹೆಚ್ಚಿಸುವ ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತಿದೆ. ಅನೇಕರು ನಮ್ಮ ಈ ಕಾರ್ಯಕ್ಕೆ ಕೈ ಜೋಡಿಸಿ ನೆರವಾಗಿದ್ದಾರೆ.ಬಡ ವಿದ್ಯಾರ್ಥಿಗಳಿಗೆ ಶಿಕ್ಷಣವೇತನ ನೀಡುವ ಮೂಲಕ ಅಸಹಾಯಕರಿಗೆ ನೆರವು ನೀಡುವಲ್ಲಿ ನಮ್ಮ ಪ್ರತಿಷ್ಠಾನದ ಸದಸ್ಯರೂ ಬಾಗಿಯಾಗಿದ್ದಾರೆ ಎಂದು ಶ್ರೀರಂಗ ಕಟ್ಟಿ ಹೇಳಿದರು.

    300x250 AD

    ಸಾಮಾಜಿಕ ಕಾರ್ಯಕರ್ತ ಪ್ರೇಮಾನಂದ ನಾಯ್ಕ ಮಾತನಾಡಿ ಪರಿಹಾರ ನೀಡುವ ಭಾವದಲ್ಲಿ ಅನುಕಂಪವಿದೆ. ಸೀಮಿತವಾದ ಜೀವನದಲ್ಲಿ ಪರಸ್ಪರ ಕಷ್ಟಗಳಿಗೆ ನೆರವಾಗುವಲ್ಲಿ ಇರುವ ಆತ್ಮತೃಪ್ತಿ ಯಾವುದರಿಂದಲೂ ದೊರಕಲಾರದು. ಮನುಷ್ಯತ್ವದ ನೆರವಿನ ಹಸ್ತಕ್ಕೆ ಯಾವುದೇ ಮಾನದಂಡವಿಲ್ಲಾ.ಕಷ್ಟದ ಪರಿಸ್ಥಿತಿಗಳು ಯಾರಿಗೂ ಬರಬಾರದು. ಅದಕ್ಕೆ ಹೆದರದೇ ಮತ್ತೆ ಬದುಕು ಕಟ್ಟಿಕೊಳ್ಳಬೇಕು ಎಂದರು.

    ಪ್ರತಿಷ್ಠಾನದ ಸದಸ್ಯರಾದ ಮಹೇಶ ಗೌಳಿ,ಉಮೇಶ ಭಾಗ್ವತ,ನರಸಿಂಹ ಭಾಗ್ವತ, ಉಪಸ್ಥಿತಿತರಿದ್ದರು. ಸಾಮಾಜಿಕ ಕಾರ್ಯಕರ್ತ ಜಯರಾಮ ಹೆಗಡೆ ಸ್ವಾಗತಿಸಿದರು. ಶಂಕರ ಹೆಗಡೆ ವಂದಿಸಿದರು. ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಸದಸ್ಯರು ಮಳೆಯಿಂದ ಹಾನಿಗೊಳಗಾದ ಹೊನ್ನಗದ್ದೆ ಗ್ರಾಮದ ಗಿಡಗಾರಿ, ಕುಂಬ್ರಿಕೊಟ್ಟಿಗೆ,ಕಂಚೀಮನೆ ಪ್ರದೇಶಗಳ ಮನೆ ಮತ್ತು ಕೃಷಿ ಭೂಮಿಯ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಹಾಯಧನದ ಚೆಕ್ ನೀಡಿ ಸಂತ್ರಸ್ಥರಿಗೆ ಧೈರ್ಯ ತಂಬಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top