ಶಿರಸಿ: ತಾಲೂಕಿನ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿಯ ಆವಾರದಲ್ಲಿ ಕೃಷ್ಣಾಷ್ಟಮಿಯ ಪ್ರಯುಕ್ತ ಆಯೋಜಿಸಿರುವ “ಪುಟಾಣಿ ಕೃಷ್ಣ ಪ್ರದರ್ಶನ ಹಾಗೂ ಸಿಹಿ ಉತ್ಸವ” ವನ್ನು ಸಂಘದ ಉಪಾಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಕೃಷ್ಣ ವೇಷಧಾರಿ ಮಕ್ಕಳಿಗೆ ಬೆಣ್ಣೆ ತಿನ್ನಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ಸಂಘದ ಸಿಬ್ಬಂದಿಗಳು, ಪುಟಾಣಿ ಮಕ್ಕಳು, ಪೋಷಕರು, ಸದಸ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮ ಅಗಸ್ಟ್ 28 ರಿಂದ ಸಪ್ಟೆಂಬರ್ 01 ರ ವರೆಗೆ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಪುಟಾಣಿ ಮಕ್ಕಳಿಗೆಲ್ಲರಿಗೂ ಉಡುಗೊರೆ, ಪ್ರಮಾಣ ಪತ್ರ ಸಿಗಲಿದೆ ಹಾಗೂ ಪಾಲಕರಿಗೆ ಸುಪರ್ ಮಾರ್ಕೆಟ್‍ನ ವಿಶೇಷ ರಿಯಾಯತಿ ಕೂಪನ್ ದೊರೆಯಲಿದೆ. ಇದೇ ಸಂದರ್ಭದಲ್ಲಿ ಸ್ಥಳೀಯ ವಿಶೇಷ ಸಿಹಿ ಖಾದ್ಯಗಳ ಮಾರಾಟ ಆಯೋಜಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.