ಯಲ್ಲಾಪುರ: ತಾಲೂಕ ಯುವಕ ಸಂಘಟನೆ ವತಿಯಿಂದ ಭಾನುವಾರ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವೇಕ್ ಹೆಬ್ಬಾರ್ ಭಾಗಿಯಾಗಿ, ಭಾರತದ ಕಂಡ ಸಾರ್ವಕಾಲಿಕ ಶ್ರೇಷ್ಠ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿದರು.
ನಂತರ ಮಾತನಾಡಿದ ಅವರು, ಶ್ರೇಷ್ಠ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರು ಕ್ರೀಡಾ ಕ್ಷೇತ್ರದಲ್ಲಿಯ ಅಪಾರ ಸಾಧನೆಯು ಇಂದಿನ ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿದಾಯಕವಾಗಿದೆ ಹಾಗೂ ಕೆಲವು ಕ್ರೀಡೆಗಳು ದೇಹವನ್ನು ಗಟ್ಟಿಗೊಳಿಸಿದರೆ, ಇನ್ನು ಕೆಲವು ಬುದ್ಧಿಯನ್ನು ಚುರುಕುಗೊಳಿಸುತ್ತವೆ. ಸಮಾಜದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸಿ ಸದೃಢ ಸಮಾಜ ನಿರ್ಮಿಸುವ ಪಣ ತೊಡೋಣ ಎಂದರು.
ಈ ಸಂದರ್ಭದಲ್ಲಿ ಕ್ರೀಡಾ ತರಬೇತುದಾರರಾದ ಜಿ.ಎಮ್.ತಾಂಡುರಾಯನ್, ಪಟ್ಟಣದ ಪಂಚಾಯತ ಸದಸ್ಯರಾದ ಸತೀಶ ನಾಯ್ಕ, ಸೋಮೇಶ್ವರ ನಾಯ್ಕ, ಯುವಮೋರ್ಚಾ ಅಧ್ಯಕ್ಷ ಪ್ರದೀಪ ಯಲ್ಲಾಪುರಕರ್, ಸ್ಥಳೀಯರಾದ ರವಿ ದೇವಾಡಿಗ, ನೀಲಕಂಠ ನಾಯ್ಕ, ಉದಯ ನಾಯ್ಕ, ಅಮೀತ ಕಮ್ಮಾರ, ನಿಖಿಲ್ ದೇವಾಡಿಗ, ಪ್ರತೀಕ ಕಮ್ಮಾರ, ನರಸಿಂಹ ಕಿರಗಾರೆ ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.