• Slide
    Slide
    Slide
    previous arrow
    next arrow
  • ಕದಂಬದಲ್ಲಿ ಕೈ ಚಕ್ಕುಲಿ ಕಂಬಳ !! – ಜಾಹೀರಾತು

    300x250 AD

    ಮಲೆನಾಡಿನ ಪ್ರಾದೇಶಿಕ ಸೊಗಡಿನಲ್ಲೊಂದಾದ ಕೈ ಚಕ್ಕುಲಿಯ ರುಚಿ ವಿಶೇಷವಾದದ್ದು. ಬಹಳ ನಾಜೂಕಿನ ಅತಿವಿರಳ ಕಲೆಯಾದ ಕೈ ಚಕ್ಕುಲಿಯ ತಯಾರಿಸುವುದು ಬಹಳ ಹಳೆಯ ಸಂಪ್ರದಾಯ. ಆದರೆ ಅದರ ತಯಾರಿಕೆ ಮರೆಯಾಗುತ್ತಿರುವ ಕಾರಣ ಈ ತಿನಿಸಿನ ಮಹತ್ವ ಅನೇಕರಿಗೆ ತಿಳಿದಿಲ್ಲ. ಅಭ್ಯಾಸವಿಲ್ಲದೆ ಖಂಡಿತಾ ಬರಲಾರದ ಬರೀ ಕೈಯಿಂದಲೇ ಚಕ್ಕುಲಿ ತಯಾರಿಸುವದನ್ನು ತರಬೇತಿ ರೂಪದಲ್ಲಿ ಆಸಕ್ತರಿಗೆ  ಕಲಿಸುವ ಉದ್ದೇಶದಿಂದ  ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ವತಿಯಿಂದ ದಿನಾಂಕ 03 & 04 ಸೆಪ್ಟೆಂಬರ್ 2021 ಮಧ್ಯಾಹ್ನ 3 ಗಂಟೆಯಿಂದ 6 ಗಂಟೆಯವರೆಗೆ ಕೈ ಚಕ್ಕುಲಿ ಕಂಬಳ ಏರ್ಪಡಿಸಲಾಗಿದೆ.

    ರುಚಿ ಹಾಗೂ ಬಾಳಿಕೆ ಜಾಸ್ತಿಯಿರುವ  ಚಕ್ಕುಲಿಗೆ ಮಾರುಕಟ್ಟೆ ಒದಗಿಸುವ ಕೆಲಸವನ್ನೂ ಸಂಸ್ಥೆಯಿಂದಲೇ ಮಾಡಲಾಗುವದು. ಕೈ ಚಕ್ಕುಲಿಯೊಂದಿಗೆ ಬೇರೆ ಬೇರೆ ಹಿಟ್ಟು, ಸಂಬಾರ ಪದಾರ್ಥಗಳನ್ನು ಉಪಯೋಗಿಸಿ ಉಪಕರಣದ ಮೂಲಕ ತಯಾರಿಸಿದ ಚಕ್ಕುಲಿಯ ಸ್ಪರ್ಧೆಯೂ ಇರಲಿದೆ.

    ಸೂಚನೆ – ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಮುಂಚಿತವಾಗಿ ಹೆಸರನ್ನು ನೋದಾಯಿಸಿಕೊಳ್ಳಬೇಕು.

    300x250 AD

    ಆಸಕ್ತರು ಹೆಚ್ಚಿನ ಮಾಹಿತಿಗಾಗಿ / ಹೆಸರನ್ನು ನೋಂದಾಯಿಸಲು ಶ್ರೀವತ್ಸ ಹೆಗಡೆ (ಮೊ.9535502274) / ಕದಂಬ ಮಾರ್ಕೆಟಿಂಗ್ (08384233163) ಸಂಪರ್ಕಿಸಬಹುದು.

    Share This
    300x250 AD
    300x250 AD
    300x250 AD
    Leaderboard Ad
    Back to top