ಶಿರಸಿ: ಯೂತ್ ಫಾರ್ ಸೇವಾ ಶಿರಸಿ ಮತ್ತು ಆರೋಗ್ಯ ಭಾರತಿ ಶಿರಸಿ ಇವುಗಳ ಸಂಯುಕ್ತಾಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ 96 ನೇ ಹುಟ್ಟು ಹಬ್ಬದ ನೆನಪಿನಲ್ಲಿ ಶಿರಸಿ ನಗರದ ಆಶಾ ಕಾರ್ಯಕರ್ತರಿಗೆ ಮತ್ತು ನರ್ಸಿಂಗ್ ಕಾಲೇಜ್ ವಿದ್ಯಾಥಿಗಳಿಗೆ ಆ.29 ರಂದು ಶಿರಸಿ ಎಂ.ಇ.ಎಸ್ ನರ್ಸಿಂಗ್ ಕಾಲೇಜ್‍ನಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 3 ರವರೆಗೆ ಹಸಿರು ಆರೋಗ್ಯ ಹಸಿರು ಆಹಾರ ಕಾರ್ಯಾಗಾರ ನಡೆಯಲಿದೆ.
ಉದ್ಘಾಟಕರಾಗಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭಾರತಿ ಆಗಮಿಸುವರು. ಬೇಬಿ ನಾಯ್ಕ ಪ್ರಾಚಾರ್ಯರು, ಎಂ.ಇ.ಎಸ್ ನರ್ಸಿಂಗ್ ಕಾಲೇಜ್ ಶಿರಸಿಪಾಲ್ಗೊಳ್ಳುವರು. ಸಸ್ಯ ಶಾಸ್ತ್ರ ಸಂಶೋಧಕರು ಡಾ. ಶ್ರೀಕಾಂತ ಗುನಗಾ ಶಿರಸಿ ಅತಿಥಿಗಳಾಗಿ ಆಗಮಿಸುವರು.
ಸಂಪನ್ಮೂಲ ವ್ಯಕ್ತಿಗಳಾಗಿ ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯ ಸಿದ್ದಾಪುರ ಅವರು ದೇಹ ರಚನಾ ಶಾಸ್ತ್ರ ವೈದ್ಯೆ ಡಾ.ಅನುಷಾ ಬಂಟ, ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯ ಡಾ. ಜಗದೀಶ ಯಾಜಿ, ವಿನಾಯಕ ಹೆಬ್ಬಾರ (ಆಯುರ್ವೇದ ವೈದ್ಯರು ಧಾತ್ರಿ ಆಯುರ್ವೇದ ಚಿಕಿತ್ಸಾಲಯ ಶಿರಸಿ ಅವರು ಹಸಿರು ಆಹಾರ ಹಸಿರು ಆರೋಗ್ಯ, ಶ್ಯಾಮಲಾ ಹೆಗಡೆ (ಮನೆಮದ್ದು ತಟ್ಟೆ, ಯುತ್ ಫಾರ್ ಸೇವಾ ಶಿರಸಿ) ಅವರು ಮನೆಮದ್ದು ಪ್ರಾತ್ಯಕ್ಷಿಕೆ, ಉಮಾಪತಿ ಭಟ್ಟ ಕೆಪಿ (ಸಂಯೋಜಕರು, ಪರಿಸರ, ಯೂತ್ ಫಾರ್ ಸೇವಾ ಶಿರಸಿ) ಔಷಧೀಯ ಸಸ್ಯಗಳ ಕುರಿತು ಮಾತನಾಡುವರು ಎಂದು ಯೂತ್ ಫಾರ್ ಸೇವಾ ಮತ್ತು ಆರೋಗ್ಯ ಭಾರತಿ ಪ್ರಕಟಣೆಯಲ್ಲಿ ತಿಳಿಸಿದೆ.