ಶಿರಸಿ: ಭಾರತೀಯ ಅಂಚೆ ಇಲಾಖೆ ಮತ್ತು ಟಿಎಸ್‌ಎಸ್ ಲಿಮಿಟೆಡ್ ಶಿರಸಿ ಅಡಿಯಲ್ಲಿ ಇಲ್ಲಿನ ನ್ಯೂ ಮಾರ್ಕೇಟ್ ಯಾರ್ಡಿನ ಪೂಗ ಭವನದಲ್ಲಿ ಆ.30 ಸೋಮವಾರ ಮಧ್ಯಾಹ್ನ 4 ಗಂಟೆಗೆ ’ಶಿರಸಿ ಸುಪಾರಿ’ ಉತ್ತಮ ಗುಣಮಟ್ಟದ ಅಡಿಕೆ ಬಿಡುಗಡೆ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ಅತಿಥಿಗಳಾಗಿ ಉತ್ತರ ಕರ್ನಾಟಕದ ಜನರಲ್ ಪೋಸ್ಟ್ ಮಾಸ್ಟರ್ ಡಾ.ಎನ್ ವಿನೋದ್‌ಕುಮಾರ್, ಟಿಎಸ್‌ಎಸ್ ಲಿಮಿಟೆಡ್ ಜನರಲ್ ಮ್ಯಾನೇಜರ್ ರವೀಶ್ ಹೆಗಡೆ, ಟಿಎಸ್‌ಎಸ್ ಲಿಮಿಟೆಡ್ ಕಾರ್ಯಾಧ್ಯಕ್ಷ ರಾಮಕೃಷ್ಣ ಎಸ್ ಹೆಗಡೆ ಕಡವೆ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.