ಶಿರಸಿ: ತಾಲೂಕಿನಲ್ಲಿ ಆ.29 ರವಿವಾರ ಒಟ್ಟೂ 10,000 ಕೋವಿಶೀಲ್ಡ್ ಲಸಿಕೆ ಲಭ್ಯವಿದ್ದು, ಅದನ್ನು ಪ್ರಥಮ ಮತ್ತು ದ್ವಿತೀಯ ಡೋಸ್ ಲಸಿಕೆ ಪಡೆದುಕೊಳ್ಳುವವರಿಗೆ ನೀಡಲಾಗುತ್ತದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಲಭ್ಯವಿರುವ 10,000 ಡೋಸ್ ಲಸಿಕೆಯನ್ನು ಮರಾಠಿಕೊಪ್ಪದಲ್ಲಿ 1500, ಟಿಎಸ್‍ಎಸ್ ಹೆಲ್ತ್ ಸೆಂಟರಿನಲ್ಲಿ 1000, ಕಸ್ತೂರಬಾ ನಗರದಲ್ಲಿ 1000, ಇಕ್ರಾ ಎಜ್ಯುಕೇಶನ್ ಟ್ರಸ್ಟ್ ನಲ್ಲಿ 1200, ಸುಗಾವಿಯಲ್ಲಿ 1000, ದಾಸನಕೊಪ್ಪದಲ್ಲಿ 600, ಬನವಾಸಿಯಲ್ಲಿ 600, ದಾಸನಕೊಪ್ಪದಲ್ಲಿ 600, ಸಾಲ್ಕಣಿ 600, ಹುಲೇಕಲ್ 600, ಹೆಗಡೆಕಟ್ಟಾ 600, ಕಕ್ಕಳ್ಳಿಯಲ್ಲಿ 200 ಡೋಸ್ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.