ಬೆಂಗಳೂರು: ಇಂಥದ್ದೊಂದು ಕಾರ್ಯಕ್ರಮಕ್ಕೆ ಅದೆಷ್ಟು ಕಿವಿಗಳು ಸಾಕ್ಷಿಯಾಗಬಲ್ಲವೋ ಗೊತ್ತಿಲ್ಲ. ಆದರೆ ರಣ ಕೌತುಕವನ್ನಂತೂ ಸೃಷ್ಟಿ ಮಾಡಿದೆ. ಕಲ್ಲಡ್ಕ ಪ್ರಭಾಕರ ಭಟ್ಟರು ಯುವಕರೆದೆಯಲ್ಲಿ ಹಿಂದುಗಳ ತಾಕತ್ತೇನು ಎನ್ನುವುದನ್ನ ತಿಳಿಸಲು ಇದೆ ಮೊಟ್ಟ ಮೊದಲ ಬಾರಿಗೆ ಕ್ಲಬ್ ಹೌಸ್ ನಲ್ಲಿ ಆ.30 ಕ್ಕೆ ನಡೆಯುವ ಹಿಂದೂ ಸಮಾವೇಶಕ್ಕೆ ಸೇರಿಕೊಳ್ಳಲಿದ್ದಾರೆ.
ಕಲ್ಲಡ್ಕ ಪ್ರಭಾಕರ ಭಟ್ಟರು ದಶಕಗಳಿಂದ ಕಂಡ ಹಿಂದೂ ಸಮಾಜದ ಏಳಿಗೆ ಮತ್ತು ಏಳು- ಬೀಳು ಹಾಗೂ ಮುಂದಿನ ಭವಿತವ್ಯದ ಕುರಿತು ದಿಕ್ಸೂಚಿ ಭಾಷಣ ಮಾಡಲಿರುವುದನ್ನ ಕೇಳಿಯೇ ಕುತೂಹಲದ ನೆರಿಗೆಗಳು ಸದ್ದಿಲ್ಲದೆ ಎದ್ದಿವೆ. ಇವರ ಜೊತೆಗೆ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಗಳ ದಿವ್ಯ ಸಾನ್ನಿಧ್ಯವಿದೆಯಲ್ಲ ಅದು ಮತ್ತೊಂದು ತೂಕ. ನೀವು ವಜ್ರದೇಹಿ ಮಠದ ಸ್ವಾಮಿಗಳ ಮಾತನ್ನೊಮ್ಮೆ ಕೇಳಬೇಕು, ದೇಹದ ಇಂಚಿಂಚಿನಲ್ಲೂ ಹಿಂದೂ ಸನಾತನ ಸಂಸ್ಕೃತಿಯ ಗತ್ತು ವೈಭವ ಎಲ್ಲವೂ ಅಡಕವಾಗಿ ಹೊಸ ಚಿಂತನೆಗಳ ಸೆಳಕೊಂದು ಸದ್ದಿಲ್ಲದೆ ಹುಟ್ಟಿಕೊಳ್ಳದಿದ್ದರೆ ಮತ್ತೆ ಹೇಳಿ.
ಕಾರ್ಯಕ್ರಮದ ನಿರೂಪಣೆಯನ್ನು ಖ್ಯಾತ ಅಂಕಣಕಾರ ಪ್ರಖರ ವಾಗ್ಮಿ ರೋಹಿತ್ ಚಕ್ರತೀರ್ಥ ನಡೆಸಿಕೊಡಲಿದ್ದಾರೆ. ಜೊತೆಗೆ ಪ್ರಖ್ಯಾತ ಗಾಯಕಿ ರಮ್ಯ ವಸಿಷ್ಟ ಅವರಿಂದ ಪ್ರಾರ್ಥನೆ ಮತ್ತು ವಂದೇ ಮಾತರಂ ಗಾಯನ ನಡೆಯಲಿದೆ. ಒಟ್ಟಿನಲ್ಲಿ ಮೂವತ್ತನೆ ತಾರೀಖಿನ ಕ್ಲಬ್ ಹೌಸಿನ ಹಿಂದೂ ಸಮಾವೇಶ ಹೊಸದೊಂದು ಸಂಚಲನ ಹುಟ್ಟಿಸುವಲ್ಲಿ ದಾಪುಗಾಲಿಡುತ್ತಿದೆ.
ಇದೇ ಆ. 30 ರಂದು ರಾತ್ರಿ 7.30 ಕ್ಕೆ ಕ್ಲಬ್ ಹೌಸ್ ನ ಊiಟಿಜuಣvಚಿ ಕ್ಲಬ್ನಲ್ಲಿ (ಪೇಜ್ ನಲ್ಲಿ) “ಹಿಂದೂ ಸಮಾವೇಶ”ವನ್ನು ಟೀಮ್ ಹಿಂದುತ್ವ ಅವರು ಆಯೋಜಿಸಿದ್ದಾರೆ. ನೀವು ಸಹ ಈ ಕಾರ್ಯಕ್ರಮಕ್ಕೆ ಸೇರಿಕೊಳ್ಳಲು ಈ ಕೆಳಗಿನ ಲಿಂಕ್ https://www.clubhouse.com/event/xXgnQ7Xb ಬಳಸಿ.
ನ್ಯೂಸ್ 13