• first
    second
    third
    previous arrow
    next arrow
  • ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ; ಎಲ್ಲೆಲ್ಲಿ ಎಷ್ಟು ಮಳೆ ಇಲ್ಲಿದೆ ಮಾಹಿತಿ..

    300x250 AD

    ಕಾರವಾರ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ರಾಜ್ಯದಲ್ಲಿ ಮಳೆ ಅಬ್ಬರ ಹೆಚ್ಚಾಗಲಿದ್ದು, ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ, ದ.ಕನ್ನಡ, ಉಡುಪಿ ಜಿಲ್ಲೆ ಸೇರಿ ರಾಜ್ಯದ 13 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

    ಜಿಲ್ಲೆಯಲ್ಲಿ ಮಳೆ ತೀವ್ರಗತಿಯಲ್ಲಿ ಇಳಿದ್ದಿದ್ದು, ಭತ್ತ ನಾಟಿ ಮಾಡುವವರಿಗೆ, ಇನ್ನಿತರ ಕೃಷಿ ಕೆಲಸಕ್ಕೆ ತೊಂದರೆಯಾಗಿದೆ. ಅ.26ರಿಂದ 27ರ ಬೆಳಿಗ್ಗೆ ವರೆಗಿನ 24 ಗಂಟೆಗಳ ಕಾಲಾವಧಿಯಲ್ಲಿನ ಮಳೆ ಪ್ರಮಾಣ ಹೀಗಿದೆ ನೋಡಿ..

    300x250 AD

    ಅಂಕೋಲಾದಲ್ಲಿ 1 ಮಿ.ಮೀ, ಭಟ್ಕಳ 37.4, ಹಳಿಯಾಳ 5.8, ಹೊನ್ನಾವರ 0.5, ಕಾರವಾರ 37.6, ಕುಮಟಾ 2.1, ಮುಂಡಗೋಡ 9.6, ಸಿದ್ದಾಪುರ 0.2, ಶಿರಸಿ 2.5, ಜೋಯಿಡಾ 31 ಹಾಗೂ ಯಲ್ಲಾಪುರದಲ್ಲಿ 7 ಮಿ.ಮೀ. ಮಳೆಯಾಗಿದೆ.

    ಜಲಾಶಯಗಳ ನೀರಿನ ಮಟ್ಟ: ಕದ್ರಾ: 34.50ಮೀ (ಗರಿಷ್ಠ), 29.25ಮೀ, 11069.00ಕ್ಯೂಸೆಕ್ (ಒಳಹರಿವು) 9594.00ಕ್ಯೂಸೆಕ್ಸ್ (ಹೊರ ಹರಿವು), ಕೊಡಸಳ್ಳಿ: 75.50 ಮೀ (ಗರಿಷ್ಠ), 68.70ಮೀ. 7543.0ಕ್ಯೂಸೆಕ್ಸ್ (ಒಳ ಹರಿವು), 10060.0ಕ್ಯೂಸೆಕ್ಸ್ (ಹೊರ ಹರಿವು), ಸೂಪಾ: 564.00ಮೀ (ಗರಿಷ್ಠ), 554.71ಮೀ, 2554.730ಕ್ಯೂಸೆಕ್ಸ್ (ಒಳ ಹರಿವು), 4706.755ಕ್ಯೂಸೆಕ್ಸ್ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 460.32ಮೀ, 296,00ಕ್ಯೂಸೆಕ್ಸ್ (ಒಳ ಹರಿವು) 1951.00ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 433.75ಮೀ, 7909.0ಕ್ಯೂಸೆಕ್ಸ್ (ಒಳ ಹರಿವು) 7745.0ಕ್ಯೂಸೆಕ್ಸ್ (ಹೊರ ಹರಿವು). ಗೇರುಸೊಪ್ಪ: 55.00 ಮೀ (ಗ), 48.61ಮೀ, 7385.0ಕ್ಯೂಸೆಕ್ಸ್ (ಒಳ ಹರಿವು) 9370.0ಕ್ಯೂಸೆಕ್ಸ್ (ಹೊರ ಹರಿವು) ಲಿಂಗನಮಕ್ಕಿ: 1819.00 ಅಡಿ (ಗ), 1812.60ಅಡಿ, 7741.00 ಕ್ಯೂಸೆಕ್ಸ್ (ಒಳ ಹರಿವು) 7594,00 ಕ್ಯೂಸೆಕ್ಸ್ (ಹೊರ ಹರಿವು).

    Share This
    300x250 AD
    300x250 AD
    300x250 AD
    Leaderboard Ad
    Back to top