ಶಿರಸಿ: ಜಿಲ್ಲೆಯ ವಿವಿಧ ತಾಲೂಕು ಆಸ್ಪತ್ರೆಗಳಲ್ಲಿ ವಿಶೇಷ ವಿಕಲ ಚೇತನರಿಗಾಗಿ ಯುಡಿಐಡಿ ಕಾರ್ಡ್‍ಗಳ ವಿತರಣೆ ಹಾಗೂ ವೈದ್ಯಕೀಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಡಿಎಚ್‍ಓ ಡಾ. ಶರದ್ ನಾಯಕ ತಿಳಿಸಿದ್ದಾರೆ.
ಆ. 30 ರಂದು ಭಟ್ಕಳ ತಾಲೂಕು ಆಸ್ಪತ್ರೆ, ಆ. 31 ಕುಮಟಾ ತಾಲೂಕು ಆಸ್ಪತ್ರೆ, ಸೆ. 1 ಯಲ್ಲಾಪುರ, ಸೆ. 2 ಮುಂಡಗೋಡ, ಸೆ. 3ಕ್ಕೆ ಶಿರಸಿ, ಸೆ. 4ಕ್ಕೆ ಅಂಕೋಲಾ ಹಾಗೂ ಸೆ. 4ರಂದು ಹಳಿಯಾಳ ತಾಲೂಕು ಆಸ್ಪತ್ರೆಯಲ್ಲಿ ಯುಡಿಐಡಿ ಕಾರ್ಡ್ ವಿತರಣೆ ಮತ್ತು ವೈದ್ಯಕೀಯ ಶಿಬಿರ ನಡೆಯಲಿದೆ. ಜೊಯಿಡಾ 66, ದಾಂಡೇಲಿ 35 ಹಾಗೂ ಹೊನ್ನಾವರ ತಾಲೂಕಿನಲ್ಲಿ 113 ಜನರಿಗೆ ಈಗಾಗಲೇ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ತಪಾಸಣೆಗೊಂಡವರಿಗೆ ಯುಡಿಐಡಿ ಕಾರ್ಡ್‍ಗಳನ್ನು ಪ್ರಿಂಟ್‍ಗೋಸ್ಕರ ಪ್ರಿಂಟಿಂಗ್ ಏಜೆನ್ಸಿಯವರಿಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.