ಶಿರಸಿ: ಮಠ ಪರಂಪರೆ, ಸನ್ಯಾಸ ಪರಂಪರೆ ಪುರಾತನವಾದುದು, ಈ ಪರಂಪರೆ ಮುಂದುವರಿಸುವ ಜವಾಬ್ದಾರಿ ಸಮಾಜದ್ದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಬೆಳ್ತಂಗಡಿ ತಾಲೂಕಿನ ಕನ್ಯಾಡಿಯಲ್ಲಿ ಶುಕ್ರವಾರ ದಕ್ಷಿಣ ಕನ್ನಡ ಕನ್ಯಾಡಿಯಲ್ಲಿ ಚಾತುರ್ಮಾಸ್ಯ ವೃತದಲ್ಲಿರುವ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ದರ್ಶನ ಮಾಡಿ ಆಶೀರ್ವಾದ ಪಡೆದು ಮಾತನಾಡಿದರು.
ನಾವು ನಂಬಿದ ಪರಂಪರೆಯನ್ನು, ನಂಬಿಕೆಯನ್ನು ಜನಸಮುದಾಯದಲ್ಲಿ ಹೆಚ್ಚಿಸುವ ಒಳ್ಳೆಯ ಪ್ರಯತ್ನ ಮಾಡಲೇಬೇಕು. ಅದರ ಪರಿಣಾಮ ಈ ಸಂಸ್ಕøತಿಯಲ್ಲಿ ಸಂಸ್ಕಾರ ಪಡೆದು ಮನುಷ್ಯನು ಮನುಷ್ಯರಾಗಿ ಬದುಕುತ್ತಿದ್ದಾರೆ ಎಂದ ಅವರು, ಸವಾಲುಗಳು ಇನ್ನೂ ತಪ್ಪಿಲ್ಲ. ನಮ್ಮಲ್ಲಿರುವ ಅನೇಕ ದೌರ್ಬಲ್ಯಗಳಿಂದ ಇನ್ನೂ ತಾರತಮ್ಯ, ಸ್ವಾರ್ಥಕ್ಕೋಸ್ಕರ ನಮ್ಮನ್ನ ಬಳಿಸಿಕೊಳ್ಳುವುದರಿಂದ ಸಮಾಜ ವಿಭಜನೆಯಾಗುತ್ತಿದೆ ಎಂದರು.
ಸನಾತನ ಸಂಸ್ಕøತಿ, ಶ್ರದ್ಧಾ, ಭಕ್ತಿ ಉಳಿಸಿಕೊಳ್ಳುವ ಕೆಲಸವಾಗಬೇಕು. ಅದು ಇಂತಹ ಕಾರ್ಯಕ್ರಮದಲ್ಲಿ ಸಂಕಲ್ಪವಾಗಬೇಕು. ನಾವು ಹೊಣೆಗಾರಿಕೆ ಮರೆತರೆ ಮುಂದಿನ ಪೀಳಿಗೆಗೆ ಸಿಗದಂತಾಗುತ್ತದೆ ಎಂದೂ ಕಾಗೇರಿ ಪ್ರತಿಪಾದಿಸಿದರು. ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಗಳು ಕಾಗೇರಿ ಅವರನ್ನು ಗೌರವಿಸಿದರು.
ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ, ಶಾಸಕ ಹರೀಶ್ ಪೂಂಜ ಅವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸ್ವಾಗತಿಸಿದರು.