ಸಿದ್ದಾಪುರ: ಮನೆ ಸಮೀಪ ಅರಣ್ಯದಲ್ಲಿ ಅಂದರ್-ಬಾಹರ್ ಇಸ್ಪೀಟ್ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡ ಘಟನೆ ತಾಲೂಕಿನ ಇಟಗಿ ಸಮೀಪದ ಹರಗಿಯಲ್ಲಿ ಗುರುವಾರ ನಡೆದಿದೆ.
ಹರಗಿಯ ಮಂಜುನಾಥ ಗಣಪತಿ ಗೌಡ ಎಂಬವರ ಮನೆ ಹತ್ತಿರದ ಅರಣ್ಯ ಪ್ರದೇಶದಲ್ಲಿ ಅಂದರ್-ಬಾಹರ್ ಇಸ್ಪೀಟ್ ಆಡುತ್ತಿದ್ದ ವೇಳೆ ಠಾಣೆಯ ಪಿಎಸೈ ಮಹಾಂತಪ್ಪ ಜಿ ಕುಂಬಾರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಆಟದಲ್ಲಿ ನಿರತರಾದ ಮಂಜುನಾಥ ಗೌಡ, ಅಣ್ಣಪ್ಪ ಗೌಡ, ಗಣಪತಿ ಗೌಡ, ನಾರಾಯಣ ಗೌಡ, ನಾಗರಾಜ ಮಡಿವಾಳ, ವೆಂಕಟೇಶ ಗೌಡ ಇವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಟಕ್ಕೆ ಬಳಸಿದ್ದ 2500 ನಗದು ಮತ್ತು ಇನ್ನಿತರ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.