ಮುಂಡಗೋಡ: ಭೂಮಿ ಸಾಗುವಳಿದಾರರ ಮತ್ತು ಭೂಮಿ ಹಕ್ಕಿನ ಸಮಸ್ಯೆಗಳನ್ನು ಆ. 30 ಸೋಮವಾರ ಮುಂಜಾನೆ 10;30 ಕ್ಕೆ ಮುಂಡಗೋಡ ಪ್ರವಾಸ ಮಂದಿರದಲ್ಲಿ ಭೂಮಿ ಹಕ್ಕು ಹೋರಾಟಗಾರರೊಂದಿಗೆ ಚರ್ಚಿಸಲಾಗುವುದು ಹಾಗೂ ಸದ್ರಿ ಚರ್ಚೆಯಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗಮಿಸಲಿದ್ದಾರೆ ಎಂದು ಮುಂಡಗೋಡ ತಾಲೂಕಿನ ಹೋರಾಟಗಾರರ ವೇದಿಕೆಯ ಅಧ್ಯಕ್ಷ ಶಿವಾನಂದ ಜೋಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ಭೂಮಿ ಸಾಗುವಳಿದಾರರ ಮತ್ತು ಭೂಮಿ ಹಕ್ಕಿನ ಸಮಸ್ಯೆಗಳಿಗೆ ಸ್ಪಂದಿಸುವ ದಿಶೆಯಲ್ಲಿ ಸಂಘಟನೆಯ ರೂಪರೇಷೆಯನ್ನು ಚರ್ಚೆಯಲ್ಲಿ ತಿರ್ಮಾನಿಸಲಾಗುವ ಚರ್ಚೆಗೆ ಆಸಕ್ತರು ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.