ಮುಂಡಗೋಡ: ಕಾತೂರ್ ಅರಣ್ಯ ವ್ಯಾಪ್ತಿಯ ಆಲಳ್ಳಿ ಗ್ರಾಮದಲ್ಲಿ ಕಾಡು ಅಣಬೆಯನ್ನು ಕೀಳಲು ಹೋದ ವ್ಯಕ್ತಿಯ ಮೇಲೆ ಕರಡಿಯೊಂದು ದಾಳಿ ಮಾಡಿದ ಘಟನೆ ಗುರುವಾರ ಬೆಳಿಗ್ಗೆ ಜರುಗಿದೆ.
ಗುರುವಾರ ನಸುಕಿನ ಜಾವ ಆಲಳ್ಳಿ ಗ್ರಾಮದ ಧರ್ಮಣ್ಣ ಮಾರುತೆಪ್ಪ ಕಂಡೋಜಿ ಹಾಗೂ ಸಂಗಡಿಗರು ಸೇರಿ ಕಾತೂರ್ ಅರಣ್ಯ ವ್ಯಾಪ್ತಿಯ ಆಲಳ್ಳಿ ಗ್ರಾಮದ ಕಾಡಿನಲ್ಲಿ ಅಣಬೆಯನ್ನು ಕೀಳಲು ಹೋದಾಗ ಧರ್ಮಣ್ಣ ಮಾರುತೆಪ್ಪ ಕಂಡೋಜಿ ಎಂಬುವರ ಮೇಲೆ ಕರಡಿ ದಾಳಿ ಮಾಡಿದೆ ಅವರನ್ನು ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಕಾತೂರ ಉಪವಲಯ ಅರಣ್ಯಾಧಿಕಾರಿ ನಾಗರಾಜ ಕಲಾಲ ಮಾಹಿತಿ ನೀಡಿದ್ದಾರೆ.
ಅರಣ್ಯದ ಅಂಚಿನಲ್ಲಿರುವ ನಮ್ಮ ಗೋವಿನ ಜೋಳದ ಹೊಲಕ್ಕೆ ಮಂಗಗಳನ್ನು ಓಡಿಸಲು ಹೋದ ಸಂದರ್ಭದಲ್ಲಿ ಏಕಾಏಕಿ ಕರಡಿ ದಾಳಿ ಮಾಡಿ ಕೈ, ಕಾಲು ಹಾಗೂ ಮುಖಕ್ಕೆ ಗಾಯಪಡಿಸಿದೆ. ಕರಡಿಯ ಜೊತೆ ಎರಡು ಮರಿಗಳಿದ್ದವು. ನನ್ನ ಮೇಲೆ ದಾಳಿ ಮಾಡಿದಾಗ ತುಂಬಾ ಭಯಭೀತನಾಗಿ ಜೋರಾಗಿ ಕೂಗಿದ್ದರಿಂದ ಕರಡಿ ಕಾಡಿನಲ್ಲಿ ಓಡಿ ಹೋಗಿದೆ ಇಲ್ಲವಾದರೆ ನನ್ನ ಮೇಲೆ ದಾಳಿ ಮಾಡುತ್ತಿತ್ತು ಎಂದು ಗಾಯಾಳು ಧರ್ಮಣ್ಣ ಹೇಳಿದ್ದಾರೆ.