ಮುಂಡಗೋಡ: ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕಾ ಘಟಕದವರು ಗುರುವಾರ ಬಾಚಣಕಿಯಲ್ಲಿ ನಡೆದ ರೈತ ಸಮಾವೇಶದ ವೇದಿಕೆಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಹಶೀಲ್ದಾರ ಶ್ರೀಧರ ಮುಂದಲಮನಿಯವÀರಿಗೆ ಮನವಿ ಸಲ್ಲಿಸಿದರು.
ಪ್ರಧಾನಮಂತ್ರಿ ಫಸಲ್‍ಬಿಮಾ ಯೋಜನೆಯಲ್ಲಿ ಬಾಚಣಕಿ ಗ್ರಾಮ ಪಂಚಾಯತ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸುತ್ತದೆ. ಪ್ರತಿ ವರ್ಷವು ಅತಿಕ್ರಮಣದಾರರನ್ನು ಒಕ್ಕಲೆಬ್ಬೆಸುತ್ತಿದ್ದು, ಕೂಡಲೇ ಪಟ್ಟಾ ವಿತರಿಸಬೇಕು. ರೈತರ ಬೋರ್ ವೆಲ್‍ಗಳಿಗೆ ಮೀಟರ್ ಆಳವಡಿಸುವುದು ಹಾಗೂ ವಿದ್ಯುತ್‍ನ್ನು ಖಾಸಗೀಕರಣ ಮಾಡುತ್ತಿರುವುದನ್ನು ರದ್ದುಪಡಿಸಬೇಕು. ರೈತರು ಬೆಳೆದ ಬೆಳಗಳಿಗೆ ಸೂಕ್ತವಾದ ವೈಜ್ಞಾನಿಕ ಬೆಲೆ ನಿಗಧಿಪಡಿಸಿ ಸರ್ಕಾರ ಖರೀದಿ ಕೇಂದ್ರ ತೆರೆಯಬೇಕು. ರೈತರಿಗೆ ಸರಿಯಾದ ಸಮಯದಲ್ಲಿ ಬೀಜ-ಗೊಬ್ಬರ ಪೂರೈಸಬೇಕು. ಬಾಚಣಕಿ ಜಲಾಶಯದ (ಡ್ಯಾಮ್) ನೀರನ್ನು ಬಾಚಣಕಿ ಗ್ರಾಮದ ಎಲ್ಲಾ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು.
1972 ರಲ್ಲಿ ಮಂಜೂರಾದ ಡಿಸ್ ಪಾರೆಸ್ಟ್ ಭೂಮಿಯನ್ನು 40-50 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದವರಿಗೆ ಕೆಜಿಪಿ ಮಾಡಿಕೊಡಬೇಕು. 2020-21 ಸಾಲಿನಲ್ಲಿ ತಾಲೂಕು ಅತಿವೃಷ್ಟಿ-ಅನಾವೃಷ್ಠಿಯಲ್ಲಿ ಸೇರ್ಪಡೆಯಾಗಿದೆ. ತಾಲೂಕಿನ ರೈತರ ಅಪಾರ ಬೆಳೆ ಹಾನಿಯಾಗಿದ್ದು ಪ್ರತಿಯೊಬ್ಬ ರೈತರಿಗೂ ಪರಿಹಾರ ಕೊಡಬೇಕು. ಅಲ್ಲದೆ ರೈತರ ಜಮೀನಿನಲ್ಲಿ ಕಾಡು ಪ್ರಾಣಿಗಳಿಂದ ಬೆಳೆ ಹಾಳಾಗುತಿದ್ದು, ಅಂತಹ ರೈತರಿಗೆ ಅರಣ್ಯ ಇಲಾಖೆಯಿಂದ ರಕ್ಷಣೆ ಹಾಗೂ ಶೀಘ್ರವೇ ಬೆಳೆ ಹಾನಿಗೆ ಪರಿಹಾರ ನೀಡಬೇಕು. ಬಾಚಣಕಿ ಗ್ರಾಮ ಪಂಚಾಯತ ಎಲ್ಲ ಜಲಾಶಯಗಳನ್ನು ಎಲ್ಲಾ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಬಾಚಣಕಿ ಗ್ರಾಮ ಪಂಚಾಯತಿಯ ಎಲ್ಲಾ ರೈತರ ಜಮೀನುಗಳಿಗೆ ದಾರಿ ನಿರ್ಮಿಸಿಕೊಡಬೇಕೆಂದು ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ, ಜಿಲ್ಲಾಧ್ಯಕ್ಷರು ಸತೀಶ ನಾಯ್ಕ, ತಾಲೂಕಾ ಅಧ್ಯಕ್ಷ ಪೀರಜ್ಜಾ ಸಾಗರ, ಮುಖಂಡರಾದ ರಾಘವೇಂದ್ರ ನಾಯ್ಕ ಕೃಷಿ ಇಲಾಖೆ ಅಧಿಕಾರಿ ಎಂ ಎಸ್ ಕುಲಕರ್ಣಿ ಸೇರಿದಂತೆ ವಿವಿಧ ಜಿಲ್ಲೆಯ ರೈತ ಮುಖಂಡರಿದ್ದರು.