ಅಂಕೋಲಾ: ಕಳೆದೆ 2 ದಿನದ ಹಿಂದೆ ಮನೆಯಿಂದ ನಾಪತ್ತೆಯಾದ ವ್ಯಕ್ತಿ ಶವವಾಗಿ ತಾಲೂಕಿನ ಬಾವಿಕೇರಿ ಗ್ರಾ.ಪಂ ವ್ಯಾಪ್ತಿಯ ಕೊಡಸಾಲ ಹಳ್ಳದಲ್ಲಿ ಪತ್ತೆಯಾಗಿದ್ದಾನೆ.
ಶಿರಕುಳಿ ಗ್ರಾಮ ನಿವಾಸಿ ನಾಗೇಶ್ ನಾರಾಯಣ್ ನಾಯ್ಕ (68)ಎಂಬಾತ ಮೃತಪಟ್ಟ ವ್ಯಕ್ತಿ. ಈತ ಪಟ್ಟಣದ ಜೈಹಿಂದ್ ಹೋಟೆಲ್’ನಲ್ಲಿ ಕೆಲಸ ಮಾಡುತ್ತಿದ್ದು, 2 ದಿನದ ಹಿಂದೆ ಮನೆಯಿಂದ ಹೋದ ಈತ ವಾಪಸ್ ಮನೆಗೆ ಬರದೆ ನಾಪತ್ತೆಯಾಗಿದ್ದ. ಈ ಕುರಿತು ಆತನ ಪುತ್ರ ಗಿರೀಶ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಈಗ ಮುಂದಿನ ತನಿಖೆ ನಡೆಯಬೇಕಿದೆ.