Slide
Slide
Slide
previous arrow
next arrow

`ಕಾರ್ಮಿಕ ಅದಾಲತ್’ ಸಮರ್ಪಕ ಜಾರಿಗೆ ನೊಡಲ್ ಅಧಿಕಾರಿಗಳ ನೇಮಕ; ಸಚಿವ ಹೆಬ್ಬಾರ್

300x250 AD

ಬೆಂಗಳೂರು: ರಾಜ್ಯದ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಜಾರಿಗೆ ತರಲಾದ `ಕಾರ್ಮಿಕ ಅದಾಲತ್’ನ ಸಮರ್ಪಕ ಜಾರಿಗೆ ಅನುವಾಗುವಂತೆ ನೊಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾರ್ಮಿಕರು ಮತ್ತು ಕಾರ್ಮಿಕರ ಕುಟುಂಬಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಅವುಗಳನ್ನು ಒಂದೇ ಬಾರಿಗೆ ಪರಿಹರಿಸುವ ನಿಟ್ಟಿನಲ್ಲಿ ಕಾರ್ಮಿಕ ಅದಾಲತ್ ಜಾರಿಗೊಳಿಸಲಾಗಿದೆ. ಇದನ್ನು ಯಶಸ್ವಿಗೊಳಿಸುವ ಸಲುವಾಗಿ, ಕೆಲಸ ಕಾರ್ಯಗಳಿಗೆ ಚುರುಕು ನೀಡುವ ಹಿನ್ನೆಲೆಯಲ್ಲಿ ನೊಡಲ್ ಅಧಿಕಾರಿಗಳನ್ನು ನೇಮಕ ಮಾಡುವುದಾಗಿ ಹೇಳಿದ್ದಾರೆ.

300x250 AD

ಹಾಗೆಯೇ ಕಾರ್ಮಿಕ ಇಲಾಖೆಯ ಅಧಿಕಾರಿಗಳು 1- 5 ನೇ ತಾರೀಖಿನ ವರೆಗೆ ಈ ಸಂಬಂಧ ಪ್ರಚಾರ ಕೈಗೊಂಡು, ಅಹವಾಲು ಸ್ವೀಕಾರ ಮಾಡಬೇಕು. 5 ರಿಂದ 15 ರ ವರೆಗೆ ಅರ್ಜಿಗಳ ವಿಚಾರಣೆ, ವಿಲೇವಾರಿ ಕಾರ್ಯಗಳು ನಡೆಯಬೇಕು. 15- 30 ರೊಳಗಾಗಿ ತೀರ್ಮಾನಗಳ ಜಾರಿ, ಪರಿಹಾರ ಧನ ಜಮೆ ಆಗಿರಬೇಕು. ತಪ್ಪಿದಲ್ಲಿ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13

Share This
300x250 AD
300x250 AD
300x250 AD
Back to top